






ಪುತ್ತೂರು: ಬೊಳ್ವಾರು ಮಹಾವೀರ ವೆಂಚರ್ಸ್ ಬಿಲ್ಡಿಂಗ್ ನ ಪಾಲಿ ಕ್ಲಿನಿಕ್ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ನಲ್ಲಿ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಯ ನಿರ್ವಹಣೆಯೊಂದಿಗೆ ತಜ್ಞ ವೈದ್ಯರುಗಳು ಕನಿಷ್ಠ ಶುಲ್ಕದಲ್ಲಿ ಚಿಕಿತ್ಸೆಗೆ ಲಭ್ಯರಿದ್ದಾರೆ.


ಸೋಮವಾರ ರೂಟ್ ಕ್ಯಾನಲ್ ತಜ್ಞರು, ಮಂಗಳಚಾರ ದಂತ ತಜ್ಞರು, ಬುಧವಾರ ಕೃತಕ ದಂತ ತಜ್ಞರು, ಗುರುವಾರ ಒಸಡು ಚಿಕಿತ್ಸಾ ತಜ್ಞರು, ಶುಕ್ರವಾರ ವಕ್ರದಂತ ಚಿಕಿತ್ಸಾ ತಜ್ಞರು, ಶನಿವಾರ ಬಾಯಿಯ ಶಸ್ತ್ರಚಿಕಿತ್ಸಾ ತಜ್ಞರು ಲಭ್ಯರಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕ್ಲಿನಿಕ್ ಪ್ರಕಟಣೆ ತಿಳಿಸಿದೆ.



ಜ.12:ಉಚಿತ ದಂತ ಚಿಕಿತ್ಸಾ ಶಿಬಿರ..
ಜ.12 ರಂದು ಬೊಳ್ವಾರು ಮಹಾವೀರ ವೆಂಚರ್ಸ್ ನ ಪುತ್ತೂರು ಪಾಲಿಕ್ಲಿನಿಕ್ ಆವರಣದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ಬೆಳಿಗ್ಗೆ(9.30) ರಿಂದ ಅಪರಾಹ್ನ(3.00) ರ ವರೆಗೆ ಜರಗಲಿದ್ದು ಹೆಚ್ಚಿನ ಮಾಹಿತಿಗಾಗಿ ಮೊ:8792493794 ನಂಬರಿಗೆ ಸಂಪರ್ಕಿಸಬಹುದು.









