ಜ. 14 :ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ,ಕುಂಬ್ಳೆ ಟ್ರಿಕ್ಕಿ ಜೆಸ್ಟರ್ಸ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಕಾರ್ಯಕ್ರಮ

0

ಬಡಗನ್ಸೂರು : ಸುಳ್ಯಪದವು ಶಬರಿನಗರಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಜ. 14 ರಂದು ಮಕರ ಸಂಕ್ರಮಣ’ ಅಂಗವಾಗಿ ಸಂಜೆ ಗಂ.6 ರಿಂದ ಶಬರಿನಗರ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ,  ರಾತ್ರಿ ಗಂ 8 ರಿಂದ ಕುಂಬ್ಳೆ ಟ್ರಿಕ್ಕಿ ಜೆಸ್ಟರ್ಸ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಈ ಸಂಧರ್ಭದಲ್ಲಿ ಮಾ. 9 ರಂದು ನಡೆಯಲಿರುವ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಡಗನ್ನೂರು ಗ್ರಾ. ಪಂ  ಮಾಜಿ ಉಪಾಧ್ಯಕ್ಷ ಗಂಗಾಧರ ರೈ ಎನ್.ಜಿ ಸುಳ್ಯಪದವು ರವರು ಬಿಡುಗಡೆ ಮಾಡಲಿದ್ದಾರೆ.ನೇಮೋತ್ಸವದ ಅದೃಷ್ಟ ಚೀಟಿಯನ್ನು ಸುಳ್ಯಪದವು ಶ್ರೀ ಮಂಜುನಾಥ ರೋಡ್‌ಲೈನ್ಸ್ ಮಾಲಕರು ಬಿಡುಗಡೆ ಮಾಡಲಿದ್ದಾರೆ.

ರಾತ್ರಿ ಗಂ 9 ರಿಂದ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೖೆವಗಳಿಗೆ ಕಲಶ ಸೇವೆ ಮಹಾಮಂಗಳಾರತಿ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಈ ಕಾರ್ಯಕ್ರಮಲ್ಲಿ ಭಕ್ತಾದಿಗಳು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ  ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here