







ಪುತ್ತೂರು: ಶಾಲಾ ಮಕ್ಕಳು ಓಡಾಡುವ ರಸ್ತೆ ಬದಿಯಲ್ಲಿ ಹಳೆ ಕಟ್ಟಡದ ಅವೇಶಗಳನ್ನು ಸುರಿದಿರುವ ಮತ್ತು ಅದರಲ್ಲಿ ಚೂಪಾದ ಕಬ್ಬಿಣದ ಮಣ್ಣುಹಿಡಿದ ಸರಳುಗಳಿರುವುದು ಮಂಜಲ್ಪಡ್ಪು ಬಳಿ ಬೆಳಕಿಗೆ ಬಂದಿದೆ.
ಮಂಜಲ್ಪಡ್ಪು ಸುದಾನ ಮತ್ತು ಬಿಇಎಂ ಶಾಲೆಯ ಬಳಿ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಹಳೆ ಕಟ್ಟಡದ ಅವೇಶಗಳನ್ನು ಉಬ್ಬು ದಿಣ್ಣೆಯಂತೆ ಸುರಿಯಲಾಗಿದೆ. ಅದರಲ್ಲಿ ಮಣ್ಣು ಹಿಡಿದ ಕಬ್ಬಿಣದ ಸರಳುಗಳಿದ್ದು, ಮಕ್ಕಳ ಕಾಲಿಗೆ ತಾಗಿದರೆ ಅಪಾಯವಾಗಲಿದೆ. ಈ ಕುರಿತು ಸಂಬಂಧಿಸಿದವರು ಎಚ್ಚೆತ್ತು ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.












