ಸೋನಿ ಟಿವಿಯ ಮಾಸ್ಟರ್ ಚೆಫ್‌ನ ಜೋಡಿ ಸ್ಪರ್ಧಿಗಳಾಗಿ ಅವನಿ ಶರ್ಮ, ವೇಣು ಶರ್ಮ

0

ಪುತ್ತೂರು: ಸೋನಿ ಟಿವಿಯ ಈ ಬಾರಿಯ ಮಾಸ್ಟರ್ ಚೆಫ್ ಸ್ಪರ್ಧೆಯ ಜೋಡಿ ಸ್ಪರ್ಧಿಗಳಾಗಿ ಅವನಿ ಶರ್ಮ ಮತ್ತು ವೇಣು ಶರ್ಮರವರು ಆಯ್ಕೆಯಾಗಿದ್ದಾರೆ.


ಸುಳ್ಯ ತಾಲೂಕಿನ ಕುದ್ಕುಳಿ ಮನೆತನದ ಕರಾಡ ಬ್ರಾಹ್ಮಣ ಸಮುದಾಯದ ಅವನಿ ಶರ್ಮರವರು ಚಿತ್ರಕಲಾ ಪರಿಷತ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ, ಕಲಾ ನಿರ್ದೇಶಕಿಯಾಗಿ ಹಾಗೂ ಆಹಾರ ವಿನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಲ್ಲಿಯೇ ಅಡುಗೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಪಾಕದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಹಲವು ವರ್ಷಗಳಿಂದ ಕರಾಡ ಸ್ಪೈಸ್ ಬಾಕ್ಸ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕರಾಡ ಶೈಲಿಯ ವಿವಿಧ ಬಗೆಯ ಅಡುಗೆಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ.

ಇವರೊಂದಿಗೆ ಜೋಡಿಯಾಗಿ ಸ್ಪರ್ಧಿಸುತ್ತಿರುವವರು ಇವರ ತಂದೆ ವೇಣು ಶರ್ಮರವರು. ಇವರಿಬ್ಬರೂ ಜೋಡಿ ಸ್ಪರ್ಧಿಗಳಾಗಿ ಮುಂದುವರೆಯುತ್ತಿದ್ದಾರೆ. ವೇಣುಶರ್ಮರವರು ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಮ್ಯಾನೇಜಿಂಗ್ ಕನ್‌ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here