






ಪುತ್ತೂರು: ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ರ ಎಪ್ರಿಲ್ನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಅರಿಯಡ್ಕ ಗ್ರಾಮದ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.


ಅರಿಯಡ್ಕ ಗ್ರಾಮ ಸಮಿತಿ ರಚನೆ ಮಾಡಿ ವಿವಿಧ ಜವಾಬ್ದಾರಿಗಳನ್ನು ಘೋಷಿಸಲಾಯಿತು. ಅರಿಯಡ್ಕ ಗ್ರಾಮ ಸಮಿತಿ ಅಧ್ಯಕ್ಷರಾಗಿ ಸಚಿನ್ ಪಾಪೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಯುವರಾಜ್ ಪೂಂಜಾ ರವರನ್ನು ಆಯ್ಕೆ ಮಾಡಲಾಯಿತು. ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ನವೀನ್ ಕುರಿಂಜ, ಸಹ ಸಂಚಾಲಕರಾಗಿ ವೆಂಕಟೇಶ್ ಪ್ರಸಾದ್, ಲೋಕೇಶ್ ಸ್ವಾಮಿನಗರ, ಪ್ರಮೋದ್ ಪಣೆಕ್ಕಿಲ, ರಮೇಶ್ ನಿಧಿಮುಂಡ, ರಥಯಾತ್ರೆ ಗ್ರಾಮ ಸಂಚಾಲಕರಾಗಿ ಸಂತೋಷ್ ಮಣಿಯಾಣಿ ಕುತ್ಯಾಡಿ, ಸಹ ಸಂಚಾಲಕರಾಗಿ ಶರತ್ ಮಂಡ್ಯಂಗಳ, ಭರತ್ ಕೌಡಿಚ್ಚಾರು, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ಹರೀಶ್ ರೈ ಜಾರುತ್ತಾರು, ಸಹ ಸಂಚಾಲಕರಾಗಿ ನಾರಾಯಣ ಚಾಕೋಟೆ, ಸುಶಾಂತ್ ಕುತ್ಯಾಡಿ, ಕುಂಞಿರಾಮ ಮಣಿಯಾಣಿ, ಪ್ರವೀಣ್ ಮಡ್ಯಂಗಳ, ಯಕ್ಷಿತ್ ಸ್ವಾಮಿನಗರ, ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಪೂವಪ್ಪ ನಾಯ್ಕ, ಸಹ ಸಂಚಾಲಕರಾಗಿ ದಾಮೋದರ ರೈ ಪಣೆಕ್ಕಿಲ ಮರದ ಮುತ್ತು, ರವಿ ಸ್ವಾಮಿ ನಗರ, ದುರ್ಗಾಪ್ರಸಾದ್ ಕುತ್ಯಾಡಿ, ಮೋಹನ ದರ್ಬೆತಡ್ಕ, ಮಹಿಳಾ ಸಮಿತಿ ಗ್ರಾಮ ಸಂಚಾಲಕಿಯಾಗಿ ಪೂರ್ಣಿಮಾ, ಸಹ ಸಂಚಾಲಕಿಯಾಗಿ ಯಕ್ಷಿತ, ವೇದಾವತಿ, ಭಾರತಿ, ಲೀಲಾವತಿ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ತಿಲಕ್ ರೈಯವರನ್ನು ಆಯ್ಕೆ ಮಾಡಲಾಯಿತು.



ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಸಿ ನಾರಾಯಣ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಾಮದಾಸ್ ರೈ, ತಿಲಕ್ ರೈ ಹಾಗೂ ಗ್ರಾಮದ ಭಕ್ತರು ಉಪಸ್ಥಿತರಿದ್ದರು.










