ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಪದಾರ್ಥಿ ನೌಕರ ಹುದ್ದೆಗೆ ಅರ್ಹರಿಗೆ ಮಾತ್ರ ಅವಕಾಶ ನೀಡುವಂತೆ ಶಶಿಧರ ವಿ.ಎನ್.ರವರಿಂದ ವ್ಯವಸ್ಥಾಪನಾ ಸಮಿತಿಗೆ ಮನವಿ

0

ಪುತ್ತೂರು: ಪುತ್ತೂರು ಶ್ರೀಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಧ್ವಜಾರೋಹಣ, ಧ್ವಜಾವರೋಹಣಕ್ಕೆ ದೇವಸ್ಥಾನದ ಅಧಿಕೃತ ಖಾಯಂ ಪದಾರ್ಥಿ ನೌಕರ ಹುದ್ದೆಗೆ ಯಾವುದೇ ಕಳಂಕ ಇಲ್ಲದ ಅರ್ಹರಿಗೆ ಮಾತ್ರ ಅವಕಾಶ ನೀಡುವಂತೆ ನರಿಮೊಗರು ಗ್ರಾಮದ ಗೌರಿಕಿರಣ ಮನೆ ನಿವಾಸಿ ಶಶಿಧರ ವಿ.ಎನ್.ರವರು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದ್ದಾರೆ.

ಶ್ರೀಮಹಾಲಿಂಗೇಶ್ವರ ದೇವಸ್ಥಾನ ತನ್ನದೇ ಆದ ಶಿಸ್ತು, ನಿಯಮ, ಶಿಷ್ಟಾಚಾರ ಹೊಂದಿರುವ ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪ್ರಾಚೀನ ಸಾರ್ವಜನಿಕ ದೇವಸ್ಥಾನವಾಗಿದೆ. ಸದ್ರಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಜಾತ್ರೋತ್ಸವದ ಧ್ವಜಾರೋಹಣ ಮತ್ತು ಧ್ವಜ ಅವರೋಹಣವನ್ನು ನಡೆಸಲು ಶ್ರೀದೇವಳದ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ದೇವಸ್ಥಾನದ ಅಧಿಕೃತ ಮಾಹಿತಿ ತಿಳಿಸಿದೆ. ಆದರೆ ಜಾತ್ರೋತ್ಸವದ ಧ್ವಜಾರೋಹಣ ಮತ್ತು ಅವರೋಹಣವನ್ನು ದೇವಸ್ಥಾನದ ಖಾಯಂ ಪದಾರ್ಥಿ ನೌಕರರಲ್ಲದ, ಯಾವುದೇ ಅಧಿಕಾರ, ಆದೇಶ, ಹಕ್ಕು, ಅರ್ಹತೆ, ನೈತಿಕತೆಗಳಿಲ್ಲದ, ಕಳಂಕಿತ ವ್ಯಕ್ತಿಗಳು ನಡೆಸಿರುದರ ಬಗ್ಗೆ ದೇವಳದ ಸಿಸಿಟಿವಿ ಫೂಟೇಜ್‌ಗಳಲ್ಲಿ, ವಿವಿಧ ಮಾಧ್ಯಮಗಳ ವೀಡಿಯೋ ಚಿತ್ರೀಕರಣಗಳಲ್ಲಿ ದಾಖಲಾಗಿದೆ. ಈ ದೂರಿನ ಯತಾರ್ಥತೆಯನ್ನು ದೃಡೀಕರಿಸುವ ನಿಟ್ಟಿನಲ್ಲಿ ಅವೆಲ್ಲವುಗಳ ನೇರ ಪುನರ್‌ಪರಿಶೀಲನೆ ನಡೆಸಲು ಮನವಿ ಮಾಡಿಕೊಳ್ಳುತ್ತಿದ್ದು ಅಂತಹ ಸಂದರ್ಭದಲ್ಲಿ ಅವಶ್ಯ ಕಂಡುಬಂದಲ್ಲಿ ಈ ದೂರುದಾರರನ್ನು ಹಾಜರಾತಿ/ಉಪಸ್ಥಿತಿಗೆ ಆಹ್ವಾನಿಸಿದಲ್ಲಿ ಹಾಜರಾಗಿ ಇನ್ನಷ್ಟು ಸ್ಪಷ್ಟತೆ ನೀಡಲು ದೂರುದಾರರು ಸಿದ್ದರಿದ್ದಾರೆ. ಆದುದರಿಂದ ದೇವಸ್ಥಾನದ ಖಾಯಂ ಪದಾರ್ಥಿ ನೌಕರರಾಗಿರುವ ನಾಗೇಶ್, ಬಾಲಕೃಷ್ಣರವರಿಗೆ ಜಾತ್ರೋತ್ಸವದ ಧ್ವಜಾರೋಹಣ, ಅವರೋಹಣ ಕಾರ್ಯಕ್ಕೆ ಜವಾಬ್ದಾರಿ ವಹಿಸಿಕೊಟ್ಟು ಆದೇಶ ಹೊರಡಿಸುವಂತೆ ಹಾಗೂ ಯಾವುದೇ ಅನದಿಕೃತ ವ್ಯಕ್ತಿಗಳು, ಸಾರ್ವಜನಿಕರು ಈ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸುವುದು, ಅಧಿಕೃತರನ್ನು ನೇರ ಬದಿಗೆ ಸರಿಸುವುದು ನಡೆಸದಂತೆ ಸೂಕ್ತ ಮುಂಜಾಗರೂಕತಾ ವ್ಯವಸ್ಥೆ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here