






ಬಡಗನ್ನೂರು: ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜ.12ರಿಂದ 14ರ ತನಕ ಪೂರ್ವ ಪದ್ಧತಿದಂತೆ ವಿಜೃಂಭಣೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಜ..12 ನಡೆಯಿತು.





ಬೆಳಗ್ಗೆ 9ರಿಂದ ಬಲಿವಾಡು ಶೇಖರಣೆ ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಣೆ ನಡೆದು ಸಂಜೆ ಉಗ್ರಾಣ ತುಂಬಿಸುವುದು,ಮಹಾಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಿತು.



13ರಂದು ಬೆಳಗ್ಗೆ ಗಂ.6.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನ ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ತೀರ್ಥ ತಂದು ಮಹಾಗಣಪತಿ ಹವನ, ನವಕಾಭಿಷೇಕ,ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ನಡೆದು ಶೀ ದೇವರ ಮೂರ್ತಿ ಬಲಿ, ಪ್ರಸಾದ ವಿತರಣೆ, ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.ಸಂಜೆ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಸೇವೆ, ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತ ಬಲಿ, ನೃತ್ಯಬಲಿ, ಕಟ್ಟೆ ಪೂಜೆ ಸುಡುಮದ್ದು ಪ್ರದರ್ಶನ ಅನ್ನಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪವಿತ್ರಪಾಣಿ ಕೇಶವ ಭಟ್ ಕೊವೆತೋಟ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ನಿಕಟಪೂರ್ವ ಅಧ್ಯಕ್ಷ ಮನೋಜ್ ರೖೆ ಪೇರಾಲು, ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಡ, ಶ್ರೀನಿವಾಸ ಗೌಡ ಕನ್ನಯ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಬಿ. ಉದಯ ರಾವ್ ಪಡುಮಲೆ,ಪುರಂದರ ರೈ ಕುದ್ಕಾಡಿ ಶಂಕರಿ ಪಟ್ಟೆ, ಗೋಪಾಲ ನಾಯ್ಕ ದೊಡ್ಡಡ್ಕ, ಶ್ರೀಮತಿ ಕನ್ನಡ್ಕ ಪ್ರಮುಖರಾದ ಕೃಷ್ಣ ರೖೆ ಕುದ್ಕಾಡಿ, ಜಯಂತ ರೖೆ ಕುದ್ಕಾಡಿ, ಗಣೇಶ್ ರೖೆ ಮುಳಿಪಡ್ಪು, ರಾಮಣ್ಣ ಗೌಡ ಬಸವಹಿತ್ಲು, ಚಂದ್ರಶೇಖರ ಆಳ್ವ ಗಿರಿಮನೆ, ಚಂದ್ರಶೇಖರ ಭಂಡಾರಿ ಕಂಬಳ ನಲಿಕಜಲು, ಡಾ.ಹರಿಪ್ರಸಾದ್ ರೖೆ ಹಾಗೂ ಊರಪರವೂರ ಭಕ್ತಾದಿಗಳು ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ ಕುರಿಯ ಇವರಿಂದ ವಿದುಷಿ ಭಾಗ್ಯಶ್ರೀ ರೈ, ವಿಂದ್ಯಾಶ್ರೀ ರೈ ನಿರ್ದೇಶಕನದಲ್ಲಿ “ನೃತ್ಯಾಂಜಲಿ” ಭರತನಾಟ್ಯ ಕಾರ್ಯಕ್ರಮ ನಡೆಯಿತು.










