ಹೆರಿಗೆ ವೇಳೆ ಮಗುವಿನ ಸಾವು : ವೈದ್ಯರ ನಿರ್ಲಕ್ಷ್ಯ ಆರೋಪ-ದೂರು

0

ಪುತ್ತೂರು:ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆರಿಗೆ ವೇಳೆ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲು ಮಹಿಳೆಯ ಕಡೆಯವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಜಮಾಯಿಸಿದ ಘಟನೆ ಜ.13ರಂದು ನಡೆದಿದೆ.


ಬೆಳ್ಳಾರೆ ಮೂಲದ ಮಹಿಳೆಯೊಬ್ಬರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದರು.ಅಲ್ಲಿ ನಾರ್ಮಲ್ ಹೆರಿಗೆ ಮಾಡಿಸುವ ವೇಳೆ ಮಗು ಮೃತಪಟ್ಟಿದೆ.ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ದೂರು ನೀಡಲೆಂದು ಮಹಿಳೆಯ ಕಡೆಯವರು ಪೊಲೀಸ್ ಠಾಣೆಯಲ್ಲಿ ರಾತ್ರಿ ವೇಳೆ ಜಮಾಯಿಸಿದ್ದರು.ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here