






ಕಾಣಿಯೂರು: ಕಾೖಮಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜ.15,16ರಂದು ನಡೆಯಲಿದೆ.


ಜ.15ರಂದು ಬೆಳಿಗ್ಗೆ ತೋರಣ ಪ್ರತಿಷ್ಠೆ ಹಾಗೂ ಉಗ್ರಾಣ ಮುಹೂರ್ತ, ಹಸಿರು ಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಊರಿನ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯಿಸುವ ಭಕ್ತಿಪ್ರಧಾನ, ಹಾಸ್ಯ, ಸಾಮಾಜಿಕ ನಾಟಕ ನಂಬಿಕೆದಾಯೆ ನಡೆಯಲಿದೆ. ಜ 16ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ಸ್ವಾಗತ, ದೇವತಾ ಪ್ರಾರ್ಥನೆ, ಪುಣ್ಯಾಹ, ಗಣಪತಿ ಹವನ, ಸಾನಿಧ್ಯ ಕಲಶಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.



ಸಂಜೆ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಗುಳಿಗ ದೈವಗಳ ಭಂಡಾರ ಅಗಳಿ ತರವಾಡಿನಿಂದ ದೇವಸ್ಥಾನಕ್ಕೆ ಆಗಮನ, ರಾತ್ರಿ ರಂಗಪೂಜೆ, ನಂತರ ಉಳ್ಳಾಕುಲು ಮತ್ತು ರಕ್ತೇಶ್ವರಿ ದೈವಗಳ ಭಂಡಾರ ಹೊರಡುವುದು. ಬಳಿಕ ಶ್ರೀ ತಂತ್ರ ಬಲಿ, ನೃತ್ಯ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಬಳಿಕ ಶ್ರೀ ಉಳ್ಳಾಕುಲು ಮತ್ತು ಶ್ರೀ ರಕ್ತೇಶ್ವರಿ, ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯಕುಮಾರ್ ಅಗಳಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ರೈ ಮಾದೋಡಿ ತಿಳಿಸಿದ್ದಾರೆ.










