







ಪುತ್ತೂರು: ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ 25ನೇ ವರ್ಷದ ಸಂಭ್ರಮದ ಅಂಗವಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಜ.14ರಂದು ಬ್ಲಾಕ್ ಕಾರ್ಟನ್ ಥಿಯೇಟರ್ ಉತ್ತರ ಕನ್ನಡ ಅರ್ಪಿಸುವ ‘ಜಿಗೋಲೋ’ ನಾಟಕ ಪ್ರದರ್ಶನ ನಡೆಯಿತು.



ದುಬಾರಿ ಜೀವನದ ಕನಸು ಹೊತ್ತು ಡೇಟಿಂಗ್ ಆಪ್ ಪರಿಚಯವಾಗಿ ಮೋಸ ಹೋದ ಕಥೆಯನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಲಾಯಿತು. ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ, ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು ಮತ್ತು ನಾಟಕದ ಕಲಾವಿದರು ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.













