






ಅಧ್ಯಕ್ಷ: ವಂ|ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷ : ರೋಶನ್ ಲಸ್ರಾದೊ ಕಾರ್ಯದರ್ಶಿ: ಸಿಲ್ವಿಯಾ ನಿರ್ಮಲ ಮೊರಾಸ್,
ವಲಯ ಪ್ರತಿನಿಧಿ: ಕ್ಲೆಮೆಂಟ್ ಪಿಂಟೊ, ಆಯೋಗಗಳ ಸಂಯೋಜಕ: ಪೌಲ್ ಹೆರಾಲ್ಡ್ ಮಸ್ಕರೇನಸ್
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಮಾಯ್ ದೆ ದೇವುಸ್ ಚರ್ಚ್ನ ಚರ್ಚ್ ಪಾಲನಾ ಸಮಿತಿಗೆ 2026-28ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚರ್ಚ್ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್ರವರ ನೇತೃತ್ವದಲ್ಲಿ ಚರ್ಚ್ನ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.


ಚರ್ಚ್ಪಾಲನಾ ಸಮಿತಿಯ ಅಧ್ಯಕ್ಷರಾಗಿ ಮಾಯ್ ದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷರಾಗಿ ರೋಶನ್ ಲಸ್ರಾದೊ (ಮಿತ್ತೂರು), ಕಾರ್ಯದರ್ಶಿಯಾಗಿ ಸಿಲ್ವಿಯಾ ನಿರ್ಮಲ ಮೊರಾಸ್ (ಪರ್ಲಡ್ಕ), ವಲಯ ಪ್ರತಿನಿಧಿಯಾಗಿ ಕ್ಲೆಮೆಂಟ್ ಪಿಂಟೊ (ನಿತ್ಯಾಧರ್) ಹಾಗೂ ಕ್ಯಾಥೊಲಿಕ್ ಶಿಕ್ಷಣ ಸಮಿತಿಯ ಕಲಿಕಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಮತ್ತು ಚರ್ಚ್ ಆಯೋಗಗಳ ಸಂಯೋಜಕರಾಗಿ ಪೌಲ್ ಹೆರಾಲ್ಡ್ ಮಸ್ಕರೇನಸ್(ಪಾಂಗ್ಲಾಯಿ)ರವರನ್ನು ಆಯ್ಕೆ ಮಾಡಲಾಯಿತು.



ಚರ್ಚ್ ಆರ್ಥಿಕ ಸಮಿತಿ:
ಚರ್ಚ್ ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಚರ್ಚ್ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್ ಆಗಿರುತ್ತಾರೆ. ಉಪಾಧ್ಯಕ್ಷರಾಗಿ ರೋಶನ್ ಲಸ್ರಾದೊ, ಕಾರ್ಯದರ್ಶಿಯಾಗಿ ಸಿಲ್ವಿಯಾ ನಿರ್ಮಲ ಮೊರಾಸ್, ಸದಸ್ಯರುಗಳಾಗಿ ಚರ್ಚ್ನ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೋ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕ ವಂ|ಮ್ಯಾಕ್ಸಿಂ ಡಿ’ಸೋಜ, ಚುನಾಯಿತ ಸದಸ್ಯರುಗಳಾಗಿ ಜೋಯೆಲ್ ಜೋಸೆಫ್ ಕುಟಿನ್ಹಾ, ಓಸ್ವಾಲ್ಡ್ ಲೋಬೋ, ವಿಕ್ಟರ್ ಪಾಸ್, ನೇಮಕ ಸದಸ್ಯರಾಗಿ ಲುವಿಸ್ ಡಿಸೋಜ, ರಾಕೇಶ್ ಜಿ. ಮಸ್ಕರೇನಸ್, ದೊರೊತಿ ಮಿನೇಜಸ್ರವರನ್ನು ಆಯ್ಕೆ ಮಾಡಲಾಯಿತು.
19 ವಾರ್ಡ್ಗಳಿಂದ ಗುರಿಕಾರರು:
ಚರ್ಚ್ ವ್ಯಾಪ್ತಿಯ 19 ವಾರ್ಡ್ಗಳ ಗುರಿಕಾರರು ಪಾಲನಾ ಸಮಿತಿಯ ಸದಸ್ಯರಾಗಿರುತ್ತಾರೆ. ಗುಂಡ್ಯಡ್ಕ ವಾರ್ಡ್ನಿಂದ ಆಂಬ್ರೋಸ್ ಡಿ’ಸೋಜ, ಬಲ್ನಾಡು ವಾರ್ಡ್ನಿಂದ ಮೌರಿಸ್ ಮೊಂತೆರೊ, ತೆಂಕಿಲ ವಾರ್ಡ್ನಿಂದ ಎವ್ಲಿನ್ ಡಿ’ಸೋಜ, ಮಿತ್ತೂರು ವಾರ್ಡ್ನಿಂದ ಸುನಿತಾ ಪೋನ್ಸೆಕಾ, ಸಾಮೆತ್ತಡ್ಕ ವಾರ್ಡ್ನಿಂದ ಪ್ರೆಸಿಲ್ಲಾ ಮಸ್ಕರೇನ್ಹಸ್, ಹಾರಾಡಿ ವಾರ್ಡ್ನಿಂದ ಜೊಯೆಲ್ ಜೋಸೆ- ಕುಟಿನ್ಹಾ, ದರ್ಬೆ ವಾರ್ಡ್ನಿಂದ ದೊರೊತಿ ಮಿನೇಜಸ್, ಪುತ್ತೂರು ವಾರ್ಡ್ನಿಂದ ಜೋನ್ ಡಿಸೋಜ, ನಿತ್ಯಾಧಾರ್ ವಾರ್ಡ್ನಿಂದ ರಿಚರ್ಡ್ ರೆಬೆಲ್ಲೊ, ಕಲ್ಲಾರೆ ವಾರ್ಡ್ನಿಂದ ಓಸ್ವಲ್ಡ್ ಲೋಬೋ, ರೋಟರಿಪುರ ವಾರ್ಡ್ನಿಂದ ಜೆಸಿಂತ ಡಿ’ಸೋಜ, ಪದವು ವಾರ್ಡ್ನಿಂದ ಬೊನಿಫೆಸ್ ಡಿ’ಸೋಜ, ಸಾಲ್ಮರ ವಾರ್ಡ್ನಿಂದ ಶಾಂತಿ ಡಿ’ಸೋಜ, ಶಿಂಗಾಣಿ ವಾರ್ಡ್ನಿಂದ ವಿಕ್ಟರ್ ಪಾಯ್ಸ್, ಪಾಂಗ್ಲಾಯಿ ವಾರ್ಡ್ನಿಂದ ಪಾವ್ಲ್ ಹೆರಾಲ್ಡ್ ಮಸ್ಕರೇನಸ್, ಬಪ್ಪಳಿಗೆ ವಾರ್ಡ್ನಿಂದ ಲೊರೆಟ್ಟಾ ಡಾಯಸ್, ಸಂಟ್ಯಾರ್ ವಾರ್ಡ್ನಿಂದ ಫಿಲೋಮಿನಾ ಕ್ರಾಸ್ತಾ, ಮೊಟ್ಟೆತ್ತಡ್ಕ ವಾರ್ಡ್ನಿಂದ ಲವಿನಾ ಪ್ರಸನ್ನಾ, ಪರ್ಲಡ್ಕ ವಾರ್ಡ್ನಿಂದ ಝೀನಾ ಗೊವಿಯಸ್ರವರು ಸದಸ್ಯರಾಗಿರುತ್ತಾರೆ.
ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು:
ಚರ್ಚ್ ವಠಾರದಲ್ಲಿರುವ ಶಾಲೆಗಳ ಪ್ರತಿನಿಧಿಯಾಗಿ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಹ್ಯಾರಿ ಡಿಸೋಜ, ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ಪ್ರತಿನಿಧಿಯಾಗಿ ಜೋನ್ಸನ್ ಡೇವಿಡ್ ಸಿಕ್ವೇರ ಹಾಗೂ ಬೆಥನಿ ಶಿಕ್ಷಣ ಸಂಸ್ಥೆಯ ಪ್ರತಿನಿಧಿಯಾಗಿ ಸಿಸ್ಟರ್ ಅನಿತಾ ಟ್ರೆಸ್ಸಿ ಪಾಸ್ರವರನ್ನು ಆಯ್ಕೆ ಮಾಡಲಾಯಿತು.
ಚರ್ಚ್ ಸಂಘಟನೆಗಳ ಮುಖ್ಯಸ್ಥರು:
ಚರ್ಚ್ ಸಂಘಟನೆಗಳ ಮುಖ್ಯಸ್ಥರಾಗಿ ಲ್ಹಾ ಕ್ರಿ.ಸ. ಸಂಚಾಲಕರಾಗಿ ಶಾಂತಿ ಮೊರಾಸ್, ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ ಪ್ರತಿನಿಧಿಯಾಗಿ ವಿಲ್ಮಾ ಸಿಕ್ವೇರ, ಲೀಜನ್ ಆಫ್ ಮೇರಿ ಅಧ್ಯಕ್ಷರಾಗಿ ಐರಿನ್ ಮಾಡ್ತಾ, ಸಿಎಲ್ಸಿ ಪ್ರತಿನಿಧಿಯಾಗಿ ಸೈಮನ್ ಡಿಸೋಜ, ಸೀ ಸಂಘಟನೆ ಅಧ್ಯಕ್ಷರಾಗಿ ಡಿಂಪಲ್ ಫೆರ್ನಾಂಡಿಸ್, ಐಸಿವೈಎಮ್ ಅಧ್ಯಕ್ಷರಾಗಿ ಸುಶಾಂತ್ ವೇಗಸ್, ವೈಸಿಎಸ್ ಸಚೇತಕರಾಗಿ ನರೇಶ್ ಲೋಬೋ ಹಾಗೂ ಕ್ರೈಸ್ತ ಶಿಕ್ಷಣ ಸಂಯೋಜಕರಾಗಿ ಕ್ಲೆಮೆಂಟ್ ಪಿಂಟೊರವರನ್ನು ಆಯ್ಕೆ ಮಾಡಲಾಯಿತು.
ಕಾನ್ವೆಂಟ್ ಮುಖ್ಯಸ್ಥರು(ಭಗಿನಿಯರು):
ಕಾನ್ವೆಂಟ್ ಮುಖ್ಯಸ್ಥರಾದ ಪತ್ರಾವೊ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಜಾನೆಟ್ ಕ್ಲಾರಾ ಕುಟಿನ್ಹಾ, ದಿವ್ಯಾಲಯ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಲೂರ್ದ್ ಮೇರಿ, ಬೆಥನಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಪ್ರಶಾಂತಿ ಹಾಗೂ ಬ್ರಿಜಿಟಾಯ್ನ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಜಾನೆಟ್ ಪಿಂಟೊರವರು ಪಾಲನಾ ಸಮಿತಿಯ ಸದಸ್ಯರಾಗಿರುತ್ತಾರೆ.
ಧರ್ಮಗುರುಗಳು:
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರಾದ ವಂ|ಮ್ಯಾಕ್ಸಿಂ ಡಿಸೋಜರವರು ಪಾಲನಾ ಸಮಿತಿಯ ಸದಸ್ಯತ್ವವನ್ನು ಹೊಂದಿರುತ್ತಾರೆ.
74 ಮಂದಿ ಸದಸ್ಯರು:
ಚರ್ಚ್ ಪಾಲನಾ ಸಮಿತಿಯಲ್ಲಿ ಒಟ್ಟು 74 ಮಂದಿ ಸದಸ್ಯರು ಇರಲಿದ್ದಾರೆ. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಚರ್ಚ್ ಪಾಲನಾ ಸಮಿತಿಯ ನೂತನ ಪದಾಧಿಕಾರಿಗಳಿಗೆ ಚರ್ಚ್ ಪ್ರಧಾನ ದರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್ರವರು ಪ್ರಮಾಣವಚನ ಬೋಧಿಸಿದರು. ಹೊಸ ವರ್ಷದ ಪ್ರಯುಕ್ತ ಡಿ.31 ರಂದು ಚರ್ಚ್ನಲ್ಲಿ ನಡೆದ ದಿವ್ಯ ಬಲಿಪೂಜೆ ಸಂದರ್ಭದಲ್ಲಿ ಸದಸ್ಯರಿಗೆ ಪ್ರಮಾಣವಚನ ಭೋದಿಸಲಾಯಿತು. 2026ರ ಜನವರಿ 1ರಿಂದ 2028ರ ಡಿಸೆಂಬರ್ 31ರವರೆಗೆ ಈ ಸಮಿತಿಯ ಅಧಿಕಾರವಧಿ ಇರುತ್ತದೆ.










