ಕಡಬ ವಲಯದಲ್ಲಿ “ನಮ್ಮಊರು-ನಮ್ಮ ಶ್ರದ್ಧಾ ಕೇಂದ್ರ” ಸ್ವಚ್ಛತಾ ಕಾರ್ಯಕ್ರಮ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ಕಡಬ ತಾಲ್ಲೂಕು ಕಡಬ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ಹತ್ತನೇ ವರ್ಷದ “ನಮ್ಮಊರು-ನಮ್ಮ ಶ್ರದ್ಧಾ ಕೇಂದ್ರ” ಸ್ವಚ್ಛತಾ ಕಾರ್ಯಕ್ರಮವು ಜನವರಿ 14ರ ಮಕರ ಸಂಕ್ರಾಂತಿ ಮೊದಲು ವಿವಿಧ ದೇವಸ್ಥಾನ,ದೈವಸ್ಥಾನ ಮತ್ತು ಶಾಲೆಗಳಲ್ಲಿ ನಡೆಯಿತು.


ಸ್ವಚ್ಛತಾ ಸಪ್ತಾಹ ಕಾರ್ಯಕ್ರಮವು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬ, ಮುರಾಜೆ ಶ್ರೀ ಅಯ್ಯಪ್ಪ ಭಜನಾ ಮಂದಿರ, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ, ಶ್ರೀ ಕ್ಷೇತ್ರ ನಾಕೂರು ಗಯಾ ಪುಳಿಕುಕ್ಕು, ಶ್ರೀ ಆದಿನಾಗಬ್ರಹ್ಮಗಡಿ ಮುಗೆರ್ಕಳ ಮತ್ತು ಸಹಪರಿವಾರ ದೈವಸ್ಥಾನ ಕಕ್ಕೆನಡ್ಕ, ಶ್ರೀ ಬ್ರಹ್ಮ ಮುಗೆರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಿಂಬಾಳ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಬಲ್ಯ, ಶ್ರೀ ಮಹಾವಿಷ್ಣು ದೇವಸ್ಥಾನ ಪಿಜಕಳ, ರಾಜನ್ ದೈವಸ್ಥಾನ ಪುಂಡಿತ್ ಮಾಡ ಗೋಳಿಯಡ್ಕ ರೇಂಜಿಲಾಡಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಶೌರ್ಯ ತಂಡದ ಸದಸ್ಯರು ಹಾಗೂ ಸೇವಾಪ್ರತಿನಿಧಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here