ಕುಂಬ್ರ ವರ್ತಕರ ಸಂಘದಿಂದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುಗೆ ಗೌರವಾರ್ಪಣೆ

0

ಪುತ್ತೂರು: ನವದೆಹಲಿಯಲ್ಲಿ ಜ.26 ರಂದು ನಡೆಯುತ್ತಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಶೇಷ ಪ್ರತಿನಿಧಿಯಾಗಿ ಭಾಗವಹಿಸಲು ಆಯ್ಕೆಯಾದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ಗೌರವಾರ್ಪಣೆ ಜ.22 ರಂದು ನಡೆಯಿತು.

ಒಳಮೊಗ್ರು ಗ್ರಾಪಂ ಕಛೇರಿಗೆ ತೆರಳಿ ಗೌರವಾರ್ಪಣೆ ಮಾಡಿದ ಸಂಘದ ಪದಾಧಿಕಾರಿಗಳು, ಈ ಗೌರವವು ಕೇವಲ ವ್ಯಕ್ತಿಗಷ್ಟೇ ಅಲ್ಲ, ಒಳಮೊಗ್ರು ಗ್ರಾಮದ ಜನತೆಗೆ ದೊರಕಿದ ಹೆಮ್ಮೆಯ ಕ್ಷಣವಾಗಿದೆ. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತ್ರಿವೇಣಿ ಪಲ್ಲತ್ತಾರು ಅವರ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಶುಭಾಶಯಗಳೊಂದಿಗೆ ಸಂಘದಿಂದ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಉಪಾಧ್ಯಕ್ಷ ಸದಾಶಿವ ಕುಂಬ್ರ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಕೋಶಾಧಿಕಾರಿ ಸಂಶುದ್ಧೀನ್ ಎ.ಆರ್, ಉದಯ ಆಚಾರ್ಯ ಕೃಷ್ಣನಗರ, ರಮೇಶ್ ಆಳ್ವ ಕಲ್ಲಡ್ಕ , ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ನಾಯ್ಕ್ ಕೆ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಿಜೆಪಿ ಗ್ರಾಮಾಂತರ ಮಂಡಲ, ಒಳಮೊಗ್ರು ಶಕ್ತಿ ಕೇಂದ್ರ, ಪುತ್ತೂರು ತಾಲೂಕು ಪಂಚಾಯತ್,ಒಳಮೊಗ್ರು ಗ್ರಾಮ ಪಂಚಾಯತ್, ದರ್ಬೆತ್ತಡ್ಕ ಸರಕಾರಿ ಶಾಲಾ ಎಸ್‌ಡಿಎಂಸಿ ಮತ್ತು ಪೋಷಕರ ವತಿಯಿಂದ,ಒಳಮೊಗ್ರು ಅನುಗ್ರಹ ಸಂಜೀವಿನಿ ಒಕ್ಕೂಟದಿಂದ ತ್ರಿವೇಣಿ ಪಲ್ಲತ್ತಾರುರವರನ್ನು ಗೌರವಿಸಲಾಗಿದೆ.

LEAVE A REPLY

Please enter your comment!
Please enter your name here