ಜ.25: ಕಾಣಿಯೂರಿನಲ್ಲಿ ಶ್ರೀ ಕೃಷ್ಣ ಕಲಾ ಕೇಂದ್ರದಿಂದ ನೃತ್ಯಾರ್ಚನೆ- ಮಾತೃ ಪೂಜನಾ ಕಾರ್ಯಕ್ರಮ

0

ಕಾಣಿಯೂರು: ಕಾಣಿಯೂರು ಶ್ರೀ ಕೃಷ್ಣ ಕಲಾ ಕೇಂದ್ರದ ಆಶ್ರಯದಲ್ಲಿ ಕಲಾ ಕೇಂದ್ರದ 4ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯಾರ್ಚನೆ, ಮಾತೃಪೂಜನಾ ಕಾರ್ಯಕ್ರಮವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಜ.25ರಂದು ನಡೆಯಲಿದೆ.

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಜ್ಞಾನೇಶ್ವರಿ ಬರೆಪ್ಪಾಡಿ ವಹಿಸಲಿದ್ದು, ಕಾಣಿಯೂರು ಶ್ರೀ ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್, ಉಡುಪಿ ಆರಕ್ಷಕ ಯೋಗೀಶ್ ವೀರಮಂಗಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭರತನಾಟ್ಯ, ಜಾನಪದ ನೃತ್ಯಗಳು, ಮಾತೃಪೂಜನಾ ಕಾರ್ಯಕ್ರಮ, ರಾಮಾವತಾರ ನೃತ್ಯರೂಪಕ ನಡೆಯಲಿದೆ ಎಂದು ನೃತ್ಯಗುರು ಗೋಪಾಲಕೃಷ್ಣ ವೀರಮಂಗಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here