ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಕಾಣಿಯೂರು: ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವ ಹಾಗೂ ನೇಮೊತ್ಸವವು ಜ 28ರಿಂದ ಜ 31ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಗೊನೆ ಮುಹೂರ್ತವು ಜ 24ರಂದು ನಡೆಯಿತು. ಅರ್ಚಕರಾದ ಗಣಪತಿ ಭಟ್, ನೂತನ್ ಭಟ್ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗಣೇಶ್ ಕುಂಬ್ಲಾಡಿ, ಮೊಕ್ತೇಸರರಾದ ನಾರ್ಣಪ್ಪ ಮಾಚಿಲ, ಆಡಳಿತ ಪಂಗಡ ಸಂಚಾಲಕ ಮೇದಪ್ಪ ಗೌಡ ವಜ್ರಡ್ಕ, ಕಾರ್ಯದರ್ಶಿ ಅಶ್ವಿತ್ ಕಂಡಿಗ, ಹಾಗೂ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here