ಸರ್ವೆ S. G. M. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ದೀಪ ಕಾರ್ಯಕ್ರಮ

0

ಪುತ್ತೂರು : ಸರ್ವೆ ಭಕ್ತಕೊಡಿ S. G. M. ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಸಂಸ್ಥೆ ಡಿವೈನ್ ಪಾರ್ಕ್ ಸಾಲಿಗ್ರಾಮ ಇದರ ಆಶ್ರಯದಲ್ಲಿ ವಿದ್ಯಾರ್ಥಿ ದೀಪ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳ ರಾಜ್ಯ ಮಟ್ಟದ ತರಬೇತುದಾರ ಪನ್ನೆ ಬೆಳ್ಳಾರೆ ಕೆ. ಪ್ರಕಾಶ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ, ಏಕಾಗ್ರತೆ, ಆತ್ಮವಿಶ್ವಾಸ,ಹಾಗೂ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವ ಬಗ್ಗೆ ಮಾಹಿತಿ, ಉತ್ತಮ ಗುಣ ನಡತೆ, ಆರೋಗ್ಯವೃದ್ಧಿ, ಪರೀಕ್ಷಾ ತಯಾರಿ, ಜೀವನದ ಎಲ್ಲಾ ರಂಗಗಳಲ್ಲಿ ಯಶಸ್ವಿಯಾಗಿ ಯೋಗ್ಯ ವ್ಯಕ್ತಿನಿರ್ಮಾಣದ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಪನ್ನೆ ಬೆಳ್ಳಾರೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತನುಡಿದರು. ಮುಖ್ಯೋಪಾಧ್ಯಾಯ ಸೋಮಶೇಖರ್ ಹಾಗೂ ಸಹಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here