







ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ದೇವಸ್ಥಾನ ಬಳಿಯ ನಿವಾಸಿ ಆಟೋಚಾಲಕ ಕೆ ರಮೇಶ್ (57ವ) ನಿಧನರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಮೇಶ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ರಮೇಶ್ ಅವರು ಕೊನೆಯುಸಿರೆಳೆದಿರುತ್ತಾರೆ. ಕೂರ್ನಡ್ಕ, ಕೆಮ್ಮಿಂಜೆ ಈ ಭಾಗದ ಹೆಚ್ಚಿನ ಮಕ್ಕಳನ್ನು ತಮ್ಮ ಆಟೋರಿಕ್ಷಾದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ಇವರು ಮಕ್ಕಳ ಪಾಲಿಗೆ ಪ್ರೀತಿಯ “ರಮೇಶ್ ಅಂಕಲ್” ಆಗಿದ್ದರು. ಎಲ್ಲರೊಂದಿಗೆ ಬೆರೆಯುತ್ತಿದ್ದ ರಮೇಶ್ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರು ತಂದೆ ದಾಸಪ್ಪ ಗೌಡ, ತಾಯಿ ಗಿರಿಜ, ಸಹೋದರಿಯಾರಾದ ಮೀನಾಕ್ಷಿ, ಶಶಿಕಲಾ, ಭಾರತಿ, ಪತ್ನಿ ಹೇಮಲತಾ ಮತ್ತು ಒರ್ವ ಗಂಡು ಮತ್ತು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.












