







ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಚೇತನರ ಗ್ರಾಮ ಸಭೆ ಜ.27ರಂದು ನಡೆಯಿತು.


ಸಭೆಯನ್ನು ಅಧ್ಯಕ್ಷ ಕೆ.ಶರತ್ ಕುಮಾರ್ ರೈ.ರವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ. ಕೆ ಕಾರ್ಯದರ್ಶಿ ಗಳಾದ ಸುರೇಂದ್ರ. ರೈ ಇ , ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ ಗ್ರಾಮಪಂಚಾಯತ್ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.



ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ರವರು ವಿಕಲ ಚೇತನರ ವಿಶೇಷ ಗ್ರಾಮ ಸಭೆಯ ಉದ್ದೇಶ ಮತ್ತು 21ವಿಕಲತೆ ವಿಧ ಗಳು ಕೆಯ್ಯುರು ಗ್ರಾಮ ಪಂಚಾಯತ್ ಕಚೇರಿ ಗ್ರಂಥಾಲಯ ಗಳಲ್ಲಿ ಅರಿವು ಕೇಂದ್ರ ದಲ್ಲಿ ವಿಶೇಷ ಚೇತನರಿಗೆ ಸಾಧನ ಸಲಕರಣೆ ದೃಷ್ಟಿ ಅಂದತ್ವವುಳ್ಳ ವಿಶೇಷ ಚೇತನರಿ ಗೆ ಬಳಕೆ ಯಾಗುವ ಬ್ರೈಲ್ ಲಿಪಿ,ಅಬಕಾಸ್ ಹಾವು-ಏಣಿ ಅಂದರ ಬ್ರೈಲ್ ಪುಸ್ತಕ ಅಟ್ಟದ ಬಗ್ಗೆ ಮಾಹಿತಿ ನೀಡಿದರು.
ವಿಶೇಷ ಅತಿಥಿ ಇಂಚರ ಫೌಂಡೇಶನ್ ಪುತ್ತೂರು ಇದರ ಸಂಪನ್ಮೂಲ ವ್ಯಕ್ತಿ ಸೌಮ್ಯ ಮಾನಸಿಕ ವಿಶೇಷ ಚೇತನರ ಅರೋಗ್ಯ ಕಾರ್ಯಕ್ರಮ ಮತ್ತು ಮಾನಸಿಕ ವಿಕಲ ಚೇತನರ ವೈದಕೀಯ ಚಿಕಿತ್ಸೆ ಗಳ ಬಗ್ಗೆ ಮಾಹಿತಿ ನೀಡಿದರು.ಪುತ್ತೂರು ಕೆನರಾ ಬ್ಯಾಂಕ್ ಅಮೂಲ್ಯ ಸಾಕ್ಷರತಾ ಕೇಂದ್ರ ಆಪ್ತ ಸಮಾಲೋಚಕಿ ಗೀತಾ ವಿಜಯ್ ಪ್ರದಾನ ಮಂತ್ರಿ ಆರೋಗ್ಯ ವಿಮಾ ಸೌಲಭ್ಯ ಹಾಗೂ ಬ್ಯಾಂಕ್ ಖಾತೆ ನಿರ್ವಹಣೆ, ಇ-ಕೆ. ವೈ. ಸಿ ಬಗ್ಗೆ ಮಾಹಿತಿ ನೀಡಿದ್ದರು.
ವಿಶೇಷ ಚೇತನರಿಗೆ ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು. ವಿಶೇಷ ಚೇತನ ವಿದ್ಯಾರ್ಥಿಯಾದ ಮಹಮ್ಮದ್ ಶಹಿಂ ಅವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದನೆ ಮಾಡಲಾಯಿತು. ವಿಶೇಷ ಗ್ರಾಮ ಸಭೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ರಫೀಕ್ ಟಿ ಎಂ ರವರು ಸಹಕಾರ ನೀಡಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ ಕೆ ಯವರು 5%ವಿಕಲ ಚೇತನರ ಅನುದಾನದ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಸಹಾಯಕರು,ಆಶಾ ಕಾರ್ಯ ಕರ್ತರು ಶಾಲೆ ಮುಖ್ಯ ಗುರುಗಳು ಅಂಗನವಾಡಿ ಕಾರ್ಯಕರ್ತರು, ತಿಂಗಳಾಡಿ ಅರೋಗ್ಯ ಕೇಂದ್ರದ ಸಮುದಾಯದ ಅಧಿಕಾರಿಗಳು ವಿಕಲಚೇತನರು ವಿಕಲ ಚೇತನರ ಪೋಷಕರು ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ. ಇ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ. ಇ. ವಂದಿಸಿದರು .










