







ಪುತ್ತೂರು: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ,ಏಕತೆ,ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಾಡ್ನೂರು, ಅರಿಯಡ್ಕ, ಬಡಗನ್ನೂರು, ಕೊಳ್ತಿಗೆ ಗ್ರಾಮವನ್ನು ಒಳಗೊಂಡ ಅರಿಯಡ್ಕ ಮಂಡಲದ ಫೆ.1 ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯುವ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.25 ರಂದು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡಿತ್ತಾಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.



ಈ ಸಂದರ್ಭದಲ್ಲಿ ಲೋಕೇಶ್ ಚಾಕೋಟೆ, ಹರೀಶ್ ರೈ ಜಾರತ್ತಾರು, ಸಚಿನ್ ಪಾಪೆಮಜಲು, ಭಾಸ್ಕರ ಬಲ್ಯಾಯ ಕಾವು, ನವೀನ್ ನನ್ಯಪಟ್ಟಾಜೆ , ಶ್ರೀಕಾಂತ್ ಕಾವು, ಶಿವಕುಮಾರ್ ಮಾಣಿಯಡ್ಕ, ಭರತ್ ಕೌಡಿಚ್ಚಾರು, ಜಗದೀಶ್ ಬಿ, ನಿತಿನ್ ಶೆಟ್ಟಿ, ರವಿ ಪ್ರಸಾದ್, ಶರತ್ ಶೇಖಮಲೆ, ಆಕಾಶ್ ಪಾಪೆಮಜಲು, ಹರಿಪ್ರಸಾದ್ ಸೇರಿದಂತೆ ಹಿಂದೂ ಬಾಂಧವರು ಉಪಸ್ಥಿತರಿದ್ದರು.










