ವಿಶ್ವ ಕುಷ್ಠ ರೋಗದ ಪ್ರಯುಕ್ತ ಪುತ್ತೂರು ಸ್ಕಿನ್ ಕ್ಲೀನಿಕ್ ಲೇಸರ್ ಸೆಂಟರ್ ವತಿಯಿಂದ ಉಚಿತ ಚರ್ಮ ತಪಾಸಣೆ, ಸಲಹಾ ಶಿಬಿರ

0

ಪುತ್ತೂರು: ಬೊಳುವಾರಿನ ನ್ಯೂ ಹರಿಪ್ರಸಾದ್ ಹೊಟೇಲ್ ಮಹಡಿ ಮೇಲಿರುವ ಪುತ್ತೂರು ಸ್ಕಿನ್ ಕ್ಲೀನಿಕ್ ಲೇಸರ್ ಸೆಂಟರ್ ವಿಶ್ವ ಕುಷ್ಠ ರೋಗದ ಪ್ರಯುಕ್ತ ಜ.30ರಂದು ಉಚಿತ ಚರ್ಮ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಆಯೋಜಿಸಿದೆ.

ಕಳೆದ ಹಲವಾರು ವರ್ಷಗಳಿಂದ ಕುಷ್ಠ ರೋಗದ ಬಗ್ಗೆ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪುತ್ತೂರು ಸ್ಕಿನ್ ಕ್ಲೀನಿಕ್ ಮಾಡುತ್ತಿದೆ.

ಜ.30ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಶಿಬಿರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೆಸರು ನೋಂದಾಯಿಸಲು 8296296888 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here