






ಉಪ್ಪಿನಂಗಡಿ: ಕಾಂಚನ ಶ್ರೀಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸ್ಥಾಪಕಗುರು, ಸಂಗೀತರತ್ನ, ಋಷಿಗಂಧರ್ವ ವಿ.ಕಾಂಚನ ವೆಂಕಟಸುಬ್ರಹ್ಮಣ್ಯ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆ ಹಾಗೂ 72ನೇ ವರ್ಷದ ‘ಕಾಂಚನೋತ್ಸವ 2026’ ಫೆ.5ರಿಂದ 7ರ ತನಕ ನಡೆಯಲಿದೆ ಎಂದು ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ ಮತ್ತು ಕಾಂಚನ ಶ್ರುತಿರಂಜಿನಿ ಅವರು ತಿಳಿಸಿದ್ದಾರೆ.



ಕಾಂಚನ ಶ್ರೀ ಶ್ರೀಲಕ್ಷ್ಮೀ ನಾರಾಯಣ ಸಂಗೀತ ಕಲಾಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಫೆ.5ರಂದು ಸಂಜೆ 5ರಿಂದ ವೇ.ಬ್ರ. ನಾರಾಯಣ ಬಡಿಕಿಲ್ಲಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದೆ. 72ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರು, ಸಂಗೀತ ರತ್ನ ಕಾಂಚನ ವೆಂಕಟಸುಬ್ರಮಣ್ಯ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂರವರ ಪುಣ್ಯ ಸ್ಮರಣೆಯ ಅಂಗವಾಗಿ ಸಂಜೆ 6ಕ್ಕೆ ನಡೆಯುವ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ಅವರು ತಬಲ ಹಾಗೂ ಕೆ.ಜೆ.ಋತ ವಯಲಿನ್ ನುಡಿಸಲಿದ್ದಾರೆ. ಸಂಜೆ 6.15 ರಿಂದ ನಡೆಯುವ ಸ್ವರ ಲಯ ಲಹರಿಯಲ್ಲಿ ಕೆ.ಜೆ. ಋತ, ಅಭಯ್ ಸಂಪಿಗೆತ್ತಾಯ, ಶ್ರೀಕೃಷ್ಣ ಭಟ್, ತೇಜಸ್ವಿ ಸಂಜಯ್, ವರ್ಚಸ್ ವಿ., ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್.ಎಸ್., ಶಮಿತ್ ಕಲ್ಕೂರ್, ಸಾಕೇತರಾಮ್ ಫಣಿ ವೇದಾಲ ಅವರು ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ. ಸಂಜೆ 7 ರಿಂದ 9ರವರೆಗೆ ಕಾಂಚನ ಶ್ರೀ ಮ್ಯೂಸಿಕ್ ಅಕಾಡೆಮಿಯ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ.



ಪ್ರವೇಶೋತ್ಸವ
ಫೆ.6ರಂದು ಬೆಳಗ್ಗೆ ಗಣಪತಿ ಹೋಮ, ಆಶ್ಲೇಷ ಬಲಿ, ವಟು ಆರಾಧನೆ ನಡೆದು 10.44ರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಚನ ಶ್ರೀಲಕ್ಷ್ಮೀ ನಾರಾಯಣ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆ ಪ್ರವೇಶೋತ್ಸವ ನಡೆಯಲಿದೆ. ಈ ವೇಳೆ ಕಾಂಚನ ಮ್ಯೂಸಿಕ್ ಅಕಾಡೆಮಿ ಶಿಷ್ಯರು, ಪ್ರಶಿಷ್ಯರು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಲಿರುವ ಅತಿಥಿ ವೃಂದದವರಿಂದ ವಿದ್ವಾನ್ ಕಾಂಚನ ವೆಂಕಟಸುಬ್ರಹಣ್ಯ ಅವರ 105ನೇ ಜನ್ಮದಿನದ ಪುಣ್ಯವರ್ಷದ ಪ್ರಯುಕ್ತ ‘ಶತಾಧಿಕ ಕಂಠಗಾಯನ ಮತ್ತು ವಾದನ’ ನಡೆಯಲಿದೆ. ಬೆಳಿಗ್ಗೆ ಗಂಟೆ 11.30ರಿಂದ ಅಭಿಷೇಕ್ ಎನ್.ಎಸ್.ಮತ್ತು ತಂಡದವರಿಂದ ನಡೆಯುವ ಗಾಯನಕ್ಕೆ ವಯಲಿನ್‌ನಲ್ಲಿ ಅಭಯ್ ಸಂಪಿಗೆತ್ತಾಯ, ದ್ವಂದ್ವ ಮೃದಂಗದಲ್ಲಿ ಕಾಂಚನ ಈಶ್ವರ ಭಟ್ ಮತ್ತು ಅಕ್ಷಯ್ ನಾರಾಯಣ ಸಹಕರಿಸಲಿದ್ದಾರೆ. ಮಧ್ಯಾಹ್ನ ಸಂಗೀತ ಸೇವೆ, ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಲೋಕಾರ್ಪಣಾ ಸಮಾರಂಭ
ಫೆ.6ರAದು ಸಂಜೆ 4.30ರಿಂದ ಸಂಗೀತ ಕಲಾಶಾಲೆ ಮತ್ತು ಸಭಾಭವನದ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಪರಂಪರಾ ವಿದ್ಯಾಪೀಠದ ಮುಖ್ಯ ಪ್ರಾಚಾರ್ಯ ವೇ.ಬ್ರ. ವಿಷ್ಣುಪ್ರಸಾದ್ ಹೆಬ್ಬಾರ್ ಭಾಗವಹಿಸಲಿದ್ದಾರೆ. ಸಂಜೆ 6ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 6.30ರಿಂದ `ಕಿಂಗ್ ಆಫ್ ಡ್ರಮ್ಸ್’ ಪದ್ಮಶ್ರೀ ಕಲೈಮಾಮಣಿ ಶಿವಮಣಿ ಹಾಗೂ ನಾಡಿನ ಹಿರಿಯ ಸಂಗೀತ ವಿದ್ವಾಂಸರಾದ ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶ್ರುತಿರಂಜನಿ ಅವರಿಂದ ದ್ವಂದ್ವ ಗಾಯನ, ಕಾಂಚನ ಸುಮನಸರಂಜನಿ, ರವಿಚಂದ್ರ ಕೂಳೂರು, ಕೆ.ಯು. ಜಯಚಂದ್ರ ರಾವ್ ಸಂಗೀತ ವಾದ್ಯ ನುಡಿಸಲಿದ್ದಾರೆ.
ಕಾಂಚನಶ್ರೀ ಪ್ರಶಸ್ತಿ ಪ್ರದಾನ
ಫೆ.7ರಂದು ಬೆಳಗ್ಗೆ 8.30ಕ್ಕೆ ವಿದುಷಿ ಚಾರುಲತಾ ರಾಮಾನುಜಂ ಅವರ ನೇತೃತ್ವದಲ್ಲಿ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ, ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿ ಹಾಗೂ ದಿವ್ಯ ನಾಮ ಸಂಕೀರ್ತನೆಗಳ ಗಾಯನ-ವಾದನಗಳೊಂದಿಗೆ ಉಂಛವೃತ್ತಿ ಸಂಗೀತ ನಡಿಗೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಪಿಳ್ಳಾರಿ ಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಟಿ ಗಾಯನ, 11.30ರಿಂದ ಸಂಗೀತ ಸೇವೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಗಾಡ್ ಆಫ್ ಇಂಡಿಯನ್ ವಯಲಿನ್' ಪದ್ಮವಿಭೂಷಣ ಡಾ. ಎಲ್. ಸುಬ್ರಹ್ಮಣ್ಯಂ ಅವರಿಗೆಕಾಂಚನ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಲೋಕಸಭಾ ಸದಸ್ಯೆ ಬಾನ್ಸುರಿ ಸ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ನೆಕ್ಕರಾಜೆ ಭಾಗವಹಿಸಲಿದ್ದಾರೆ.
ಸಂಜೆ 6ರಿಂದ ಸತ್ಯನಾರಾಯಣ ಪೂಜೆ ನಡೆಯಲಿದ್ದು, 6.30ರಿಂದ ಸುರ-ಸಂಗೀತ ಕಾರ್ಯಕ್ರಮ ಪದ್ಮವಿಭೂಷಣ ಡಾ. ಎಲ್. ಸುಬ್ರಹ್ಮಣ್ಯಂ ಮತ್ತು ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ನಡೆಸಿಕೊಡಲಿದ್ದಾರೆ. ಪಂಡಿತ್ ಆದಿತ್ಯ ಓ.ಕೆ., ವಿದ್ವಾನ್ ವಿ.ವಿ. ರಮಣಮೂರ್ತಿ, ಪಂಡಿತ್ ನಿನಾದ್ ಮೂಲೋಕರ್, ಪಂಡಿತ್ ಪ್ರಸಾದ್ ಪಧೈ, ಪಂಡಿತ್ ಸಂದೇಶ್ ಕದಮ್ ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ.
6 ಸಾವಿರ ಜನರ ನಿರೀಕ್ಷೆ
ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದೆಲ್ಲೆಡೆಯಿಂದ ಸುಮಾರು 5ರಿಂದ 6 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಂದವರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಉಪಾಹಾರ, ರಾತ್ರಿ ಊಟದ ವ್ಯವಸ್ಥೆ ಇರುತ್ತದೆ ಎಂದು ಅವರು ತಿಳಿಸಿದರು.
ತಾ.ಪಂ. ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಕಾಂಚನವು ಇಂದು ವಿಶ್ವ ಪ್ರಸಿದ್ಧಿ ಪಡೆಯಲು ಕಾಂಚನ ಮನೆತನದವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕಾರಣವಾಗಿದೆ. ಕುಗ್ರಾಮವಾಗಿದ್ದ ಕಾಂಚನ ಈ ಮನೆತನದಿಂದಾಗಿ ಅಭಿವೃದ್ಧಿ ಕಂಡಿದೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಇವರ ಕೊಡುಗೆ ಅಪಾರವಿದೆ. ಸಂಗೀತ ಕಲಾಶಾಲೆ, ಸಭಾಭವನ, ಭೋಜನ ಶಾಲೆ ಲೋಕಾರ್ಪಣೆ ಹಾಗೂ 72ನೇ ವರ್ಷದ ಕಾಂಚನೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಲಾಗುವುದು ಎಂದರು.
ಕಾಂಚನ ಶ್ರೀಲಕ್ಷ್ಮೀ ನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್ನ ಕಾರ್ಯದರ್ಶಿ ಕೆ. ರೋಹಿಣಿ ಸುಬ್ಬರತ್ನಂ, ಕೆ.ಯು.ಜಯಚಂದ್ರ ರಾವ್, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ಮೋಹನಚಂದ್ರ ಕಾಂಚನ, ಕೃಷ್ಣಪ್ರಸಾದ್ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶಿವರಾಮ ಕಾರಂತ ಊರಾಬೆ ಸ್ವಾಗತಿಸಿ, ನ್ಯಾಯವಾದಿ ರಾಜಶೇಖರ ಹಿಲ್ಯಾರು ವಂದಿಸಿದರು.
ಕಾಂಚನ ಕರ್ನಾಟಕದ ತಿರುವಯ್ಯಾರ್
ಸಂಗೀತದ ಮೂಲಕ ಕಾಂಚನ ಕರ್ನಾಟಕದ ತಿರುವಯ್ಯಾರ್ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಈಗಿರುವ ಕಾಂಚನ ಮನೆತನದವರ ಪೂರ್ವಜನರು ಮದ್ರಾಸ್‌ನಿಂದ ಕಾಂಚನಕ್ಕೆ ಬಂದು ಕಾಂಚನದಲ್ಲಿ ದೇವಾಲಯ, ವಿದ್ಯಾಲಯ, ಸಂಗೀತಶಾಲೆ ಸ್ಥಾಪಿಸಿದ್ದರು. ಸಾಕಷ್ಟು ಭೂಮಿಯನ್ನು ದಾನ ಮಾಡಿದ್ದಾರೆ. ಇಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ ನೂರಾರು ಮಂದಿ ಈಗ ರಾಜ್ಯ, ಹೊರರಾಜ್ಯ, ವಿದೇಶದಲ್ಲೂ ನೆಲೆಸಿದ್ದಾರೆ. ಇಲ್ಲಿನ ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟçಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ.
-ಕೆ.ಯು.ಜಯಚಂದ್ರ ರಾವ್
10 ತಿಂಗಳಲ್ಲಿ ಕಟ್ಟಡ ಪೂರ್ಣ
ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕೇವಲ 10 ತಿಂಗಳ ಅವಧಿಯಲ್ಲಿ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನಶಾಲೆ ಪುನರ್‌ನಿರ್ಮಾಣಗೊಂಡಿದೆ.










