






ಪುತ್ತೂರು: ಪುತ್ತೂರಿನ 2 ನೇ ಅತಿ ದೊಡ್ಡ ಇತಿಹಾಸ ಪ್ರಸಿದ್ದ ಜಾತ್ರೋತ್ಸವ ಎಂದೇ ಕರೆಯಲ್ಪಡುವ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜ.31 ರಂದು ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ವಿತರಣಾ ಮೆರವಣಿಗೆಯು ಜ.28 ರಂದು ಪುತ್ತೂರು ಪೇಟೆಯಲ್ಲಿ ನಡೆಯಿತು.


ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ಆಮಂತ್ರಣ ವಿತರಣೆಗೆ ಚಾಲನೆ ನೀಡಿದರು. ದರ್ಬೆ ವೃತ್ತದಿಂದ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ಕಲ್ಲೇಗ ದೈವಸ್ಥಾನದ ತನಕ ಪಾದಯಾತ್ರೆ ಮೂಲಕ ತೆರಳಲಾಯಿತು. ಕೊಂಬು ಕಹಳೆಯೊಂದಿಗೆ, ಸರ್ವವಾದ್ಯದ ಸದ್ದಿನೊಂದಿಗೆ ಬಣ್ಣ ಬಣ್ಣದ ಕೊಡೆಗಳು, ಕೇಸರಿ ಧ್ವಜಗಳು ಪತ್ರ ವಿತರಣೆಗೆ ಮೆರುಗು ನೀಡಿತ್ತು.



ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಶಾಂತ್ ಮುರ, ಚಂದ್ರಶೇಖರ, ಜಾನಕಿ ಬಾಲಕೃಷ್ಣ ಮುರ, ಪ್ರತೀಕ ಪೂರ್ಣೇಶ್, ಕೃಷ್ಣಪ್ಪ ಪೂಜಾರಿ, ರಾಮಚಂದ್ರ ಮಂಜಲ್ಪಡ್ಪು, ನಾರಾಯಣ ಮುಗೇರ, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ನಗರಸಭಾ ಮಾಜಿ ಕೆ. ಜೀವಂಧರ್ ಜೈನ್, ನಗರಸಭಾ ಮಾಜಿ ಸದಸ್ಯ ದಿನೇಶ್ ಶೇವಿರೆ, ರವಿಕಿರಣ್ ನೆಲಪ್ಪಾಲು, ವಿನಯ ಕಲ್ಲೇಗ, ಹೆಚ್ ಉದಯ ಕುಮಾರ್, ಯು ಲೋಕೇಶ್ ಹೆಗ್ಡೆ, ಜಿನ್ನಪ್ಪ ಪೂಜಾರಿ, ಪೂರ್ಣೇಶ್ ಭಂಡಾರಿ, ಲೋಕೇಶ್ ಪಡ್ಡಾಯೂರು, ಚಂದ್ರಶೇಖರ್ ಗೌಡ ಕಲ್ಲೇಗ, ನಗರಸಭಾ ಸದಸ್ಯ ದಿನೇಶ್ ಶೇವಿರೆ, ಮನೋಹರ, ಶೋಭಿತ್, ಪ್ರಶಾಂತ್ ಅಜೇಯನಗರ, ಕಿರಣ್ ಕಲ್ಲೇಗ, ಶಂಕರ ಪಾಟಾಳಿ, ಗಣೇಶ್ ಆಚಾರ್ಯ, ಜಯರಾಮ ನೆಲಪ್ಪಾಲು, ವಿಜಯ, ನಾರಾಯಣ ಗೌಡ ಕಲ್ಲೇಗ, ಮುರಳಿ, ಮೀನಾಕ್ಷಿ ಡಿ ಗೌಡ, ಸುನಿತ, ಕಲ್ಕುಡ ದೈವದ ನರ್ತಕ ಹೊನ್ನಪ್ಪ ನಲಿಕೆ, ಕಲ್ಲುರ್ಟಿ ದೈವದ ನರ್ತಕ ರೋಹಿತ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.










