






ಪುತ್ತೂರು :ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಫೆ.3ರಂದು ಚೆನ್ನಾವರ ಪ್ರಾಥಾಮಿಕ ಶಾಲೆ ಮತ್ತು ಕಟ್ಟತ್ತಾರು ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ನಿರ್ದೆಶನದಂತೆ ಇಕೋ ಕ್ಲಬ್ ವತಿಯಿಂದ ಕೃಷಿಕ್ಷೇತ್ರ ಸಂದರ್ಶನದ ಉದ್ದೇಶದಿಂದ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


ಸುಮಾರು 40 ವಿದ್ಯಾರ್ಥಿಗಳು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಚೆನ್ನಾವರ ಶಾಲೆಯ ಮುಖ್ಯಗುರು ಮಲ್ಲೇಶಯ್ಯ ಮತ್ತು ಕಟ್ಟತ್ತಾರು ಶಾಲೆಯ ಮುಖ್ಯಗುರು ಪ್ರಶಾಂತ್ ದೊಡ್ಡಮನಿ ಮತ್ತು ಶಿಕ್ಷಕರಾದ ಶಿಲಾವತಿ, ರಾಜೇಶ್ವರಿ, ಮಂಜುಶ್ರಿ ಪಾಲ್ಗೊಂಡಿದ್ದರು. ಕೃಷಿ ಕ್ಷೇತ್ರದಲ್ಲಿ ಬೆಳೆಸಲಾದ ಎಲ್ಲಾ ಬೆಳೆಗಳನ್ನು ವೀಕ್ಷಣೆ ಮಾಡಿ ವೈಜ್ಞಾನಿಕ ಕೃಷಿಕ ಮತ್ತು ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.



ರಾಷ್ಟ್ರಿಯ ಕೃಷಿ ಪ್ರಶಸ್ತಿ ಪುರಸ್ಕೃತ, ಕೃಷಿಕ ಕಡಮಜಲು ಸುಭಾಸ್ ರೈಯವರು ತನ್ನ ಜೀವನಾನುಭವವನ್ನು ತಿಳಿಸಿ ಕೃಷಿಯನ್ನು ಉದ್ಯೋಗ ಎಂದು ತಿಳಿದುಕೊಂಡು ಶ್ರೀಮಂತ ಬದುಕನ್ನು ಕಟ್ಟಿಕೊಳ್ಳಬಹುದೆಂದು ತಿಳಿಸಿದರು.
ಈ ಸಂದರ್ಬದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಪ್ರೀತಿ ಎಸ್ ರೈ ಕಡಮಜಲು ಸಂದರ್ಶಕರನ್ನು ಸ್ವಾಗತಿಸಿದರು.










