






ಪುತ್ತೂರು :ಪುತ್ತೂರಿನ ಬೋಳುವಾರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ತಾಂತ್ರಿಕ ತರಬೇತಿಯನ್ನು ನೀಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿರುವ ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ 2025 – 26 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಫೆ.9ರಂದು ನೆಹರು ನಗರದ ಕಾರ್ಜಾಲು ಮೈದಾನದಲ್ಲಿ ಜರಗಿತು.



ಕಾರ್ಯಕ್ರಮವನ್ನು ಕಾರ್ಜಾಲು ಧೂಮಾವತಿ ದೈವಸ್ಥಾನದ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕಲ್ಲೇಗ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್, ಕಬಡ್ಡಿ ಹಗ್ಗ ,ಜಗ್ಗಾಟ, ಕ್ರಿಕೆಟ್ ಪಂದ್ಯಾಟಗಳನ್ನು ಏರ್ಪಡಿಸಲಾಯಿತು. ಕ್ರೀಡಾಕೂಟವನ್ನು ದೈಹಿಕ ಶಿಕ್ಷಕರಾದ ಸಂತೋಷ್, ಪ್ರದೀಪ್, ನವೀನ್ ,ನಿತೇಶ್ ರವರು ನಡೆಸಿಕೊಟ್ಟರು.




ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುತ್ತೂರು ಗೃಹ ನಿರ್ಮಾಣ ಸಹಕಾರಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ್ ಶೆಟ್ಟಿ ಕೊಂಬಿಲ, ನೆಟ್ಲ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನವೀನ್ ಗಟ್ಟಿ ಉಪಸ್ಥಿತರಿದ್ದರು ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಮಹೇಶ್ ಶೆಟ್ಟಿ ಸ್ವಾಗತಿಸಿ, ಜ್ಞಾನ ಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ಪುತ್ತೂರು ಶಾಖೆಯ ಮುಖ್ಯಸ್ಥ ಹರ್ಷಿತ್ ಹನುಮಜೆ ವಂದಿಸಿದರು.










