ಪುತ್ತೂರು ಆಸ್ಪತ್ರೆಗಳ ಒಕ್ಕೂಟದ ಕ್ರೀಡಾಕೂಟ

0

ಪುತ್ತೂರು: ಫೆ.7 ಮತ್ತು 8 ರಂದು ಪುತ್ತೂರು ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆದ ಪುತ್ತೂರು ಆಸ್ಪತ್ರೆಗಳ ಒಕ್ಕೂಟದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಪುತ್ತೂರು ಸಿಟಿ ಆಸ್ಪತ್ರೆ ಪ್ರಥಮ ಮತ್ತು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ದ್ವಿತೀಯ ಸ್ಥಾನ, ಪುರುಷರ ಹಗ್ಗಜಗ್ಗಾಟದಲ್ಲಿ ಪುತ್ತೂರು ಆದರ್ಶ ಆಸ್ಪತ್ರೆ ಮತ್ತು ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎರಡು ದಿನಗಳ ಕ್ರೀಡಾಕೂಟದಲ್ಲಿ ಪುತ್ತೂರಿನ ವಿವಿಧ ಆಸ್ಪತ್ರೆಗಳ ತಂಡಗಳು ಭಾಗವಹಿಸಿತು.


ವಿವೇಕಾನಂದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ ಎಂ ಕೃಷ್ಣ ಭಟ್ ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಫೆ.8ರಂದು ಸಮಾರೋಪ ಸಮಾರಂಭದಲ್ಲಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಐಎಮ್‌ಎ ಅಧ್ಯಕ್ಷ ಡಾ.ಶ್ರೀಪತಿ ರಾವ್, ಆದರ್ಶ ಆಸ್ಪತ್ರೆಯ ಡಾ.ಎಸ್ ಎಸ್ ಜೋಶಿ, ವೈರ‍್ಸ್ ಆಸ್ಪತ್ರೆಯ ಡಾ.ಪ್ರಶಾಂತ್ ಜಾನ, ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಎಮ್ ಎಸ್ ಶೆಣೈ ಮತ್ತು ಡಾ. ಎಸ್ ಎಮ್ ಪ್ರಸಾದ್ ಬಹುಮಾನ ವಿತರಣೆ ಮಾಡಿದರು. ಮಹಾವೀರ ಆಸ್ಪತ್ರೆಯ ಡಾ. ಸಾಯಿ ಪ್ರಕಾಶ್, ಸಿಟಿ ಆಸ್ಪತ್ರೆಯ ಡಾ.ನಿರುಪಮ ಹಾಗೂ ಸರಕಾರಿ ಆಸ್ಪತ್ರೆಯ ಹರೀಶ ಮತ್ತು ರವಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಕೂಟದಲ್ಲಿ ಯತೀಶ್, ಜ್ಯೋತಿ, ಗೋಪಿನಾಥ್, ಪ್ರಜ್ವಲ್, ನಿಪೇಕ್ಷ ಕಲ್ಲಾರೆ, ಪುಷ್ಪ ಬನ್ನೂರು, ಶ್ರವಣ್ ಬನ್ನೂರು, ತ್ರಿಶೂಲ್ ರಾಜ್ ಬನ್ನೂರು ಇವರು ತೀರ್ಪುಗಾರರಾಗಿ ಸಹಕರಿಸಿದರು. ಧನುಷ್ ಅವರು ವೀಕ್ಷಕ ವಿವರಣೆಯನ್ನು ನೀಡಿದರು.


ಕ್ರೀಡಾಕೂಟದ ಫಲಿತಾಂಶ:
ಪುರುಷರ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಸಿಟಿ ಆಸ್ಪತ್ರೆ (ಪ್ರ), ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ (ದ್ವಿ), ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ಸಿಟಿ ಆಸ್ಪತ್ರೆ (ಪ್ರ), ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ (ದ್ವಿ), ಪುರುಷರ ಹಗ್ಗ ಜಗ್ಗಾಟದಲ್ಲಿ ಆದರ್ಶ ಆಸ್ಪತ್ರೆ(ಪ್ರ), ಪ್ರಗತಿ ಆಸ್ಪತ್ರೆ(ದ್ವಿ), ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಪ್ರಗತಿ ಆಸ್ಪತ್ರೆ(ಪ್ರ), ವೈದ್ರ್ಸ್ ಆಸ್ಪತ್ರೆ(ದ್ವಿ), ನಿಂಬೆ ಹಣ್ಣಿನ ಜೊತೆಗೆ ಓಟದಲ್ಲಿ ಸರಕಾರಿ ಆಸ್ಪತ್ರೆಯ ಶಾಲಿನಿ(ಪ್ರ), ಪುತ್ತೂರು ಸಿಟಿ ಅಸ್ಪತ್ರೆಯ ಯಶ್ಮಿತ(ದ್ವಿ), 40 ವರ್ಷ ಮೇಲ್ಪಟ್ಟ ಪುರುಷರ ವೇಗದ ನಡಿಗೆ ಯಲ್ಲಿ ಪ್ರಗತಿ ಆಸ್ಪತ್ರೆಯ ದಿನೇಶ್(ಪ್ರ), ಪುತ್ತೂರು ಸಿಟಿ ಆಸ್ಪತ್ರೆಯ ಲಕ್ಷ್ಮೀಶ(ದ್ವಿ), ಮಹಿಳೆಯರ ವೇಗದ ನಡಿಗೆಯಲ್ಲಿ ಸರಕಾರಿ ಆಸ್ಪತ್ರೆಯ ಸುನಿತಾ ಪಿಂಟೊ(ಪ್ರ), ಚಂದ್ರಿಕಾ(ದ್ವಿ), ಮಹಿಳೆಯರ 100 ಮೀಟರ್ ವೇಗದ ಓಟದಲ್ಲಿ ಪ್ರಗತಿ ಆಸ್ಪತ್ರೆಯ ಹಿತ(ಪ್ರ), ಅನುಶ್ರೀ(ದ್ವಿ), ಪುರುಷರ 100 ಮೀಟರ್ ವೇಗದ ಓಟದಲ್ಲಿ ವೈದ್ರ‍್ಸ್ ಆಸ್ಪತ್ರೆಯ ಭುವನ್ (ಪ್ರ), ಪುಷ್ಪರಾಜ್ (ದ್ವಿ), ಗೂಟಕ್ಕೆ ಗುರಿಯೆಸೆತದಲ್ಲಿ ವೈದ್ರ್ಸ್ ಆಸ್ಪತ್ರೆಯ ಪುಷ್ಪರಾಜ್(ಪ್ರ) ಬಹುಮಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here