ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

0

ವಿಟ್ಲ: ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.


ತಾಲೂಕು ಆಸ್ಪತ್ರೆಯ ತ್ಯಾಜ್ಯ ನಿರ್ವಹಣೆಗಾಗಿ MRPLನ ಸಿ.ಎಸ್.ಆರ್ ನಿಧಿಯಿಂದ 48 ಲಕ್ಷ ರೂ ವೆಚ್ಚದಲ್ಲಿ STP ಪ್ಲಾಂಟ್ ಅನ್ನು ಸ್ಥಾಪಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಯವರು ಸಭೆಗೆ ತಿಳಿಸಿದರು. ಆಸ್ಪತ್ರೆ ನಿರ್ವಹಣೆ ಹಾಗೂ ವಿವಿಧ ಕಾರ್ಯಗಳ ಪ್ರಗತಿ ಬಗ್ಗೆ ಸಮಾಲೋಚನೆ ನಡೆಯಿತು.

ಸಭೆಯಲ್ಲಿ ತಾಲೂಕು ಆಸ್ಪತ್ರೆಯ ಡಾ.ಪುಷ್ಪಲತಾ, ಡಾ.ಅಶೋಕ್ ರೈ, ಉಪತಹಶೀಲ್ದಾರ್ ದಿವಾಕರ್, ಜಿಲ್ಲಾಪಂಚಾಯತ್ ಕಾರ್ಯನಿರ್ವಾಹಕ ಇಂಜಿನೀಯರ್ ತಾರನಾಥ ಸಾಲ್ಯಾನ್,ಪುರಸಭೆಯ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ,ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ವೆಂಕಪ್ಪ ಪೂಜಾರಿ,ಜೋಸೆಫ್ ಪ್ರವೀಣ್ ರಾಡ್ರಿಗಸ್,ಅಶೋಕ್,ರೇಷ್ಮಾ ಟೀಲಿಸ್,ಪುರುಷೋತ್ತಮ ಬಂಗೇರಾ,ಶಿವಾನಂದ ನಾಯ್ಕ ಸೇರಿದಂತೆ ತಾಲೂಕು ಆಸ್ಪತ್ರೆ ವೈದ್ಯರುಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here