






ಪುತ್ತೂರು: ಚಂದ್ರಗ್ರಹಣದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ಮಾ.2 & 3ರಂದು ದೇವರ ದರ್ಶನ ಮತ್ತು ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.



ಚಂದ್ರಗ್ರಹಣದ ಅಂಗವಾಗಿ ಮಾ.2 ಮತ್ತು 3ರಂದು ಸರ್ಪ ಸಂಸ್ಕಾರ ಪೂಜೆ ನಡೆಯುವುದಿಲ್ಲ. ಮಾ.3ರಂದು ಯಾವುದೇ ಸೇವೆಗಳೂ ಇರುವುದಿಲ್ಲ, ಅಂದಿನ ಮಧ್ಯಾಹ್ನದ ಮಹಾಪೂಜೆ ಬೆಳಿಗ್ಗೆ 8ಕ್ಕೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಬೆಳಿಗ್ಗೆ 9 ಗಂಟೆವರೆಗೆ ಉಪಹಾರ ಸಿಗಲಿದ್ದು, ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುವುದಿಲ್ಲ. ಬಳಿಕ ಸಂಜೆ 7ರ ನಂತರ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












