ಫೆ.15 ರಿಂದ ಎಲಿಕಾ ಪಾಷಾಣಮೂರ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ, ಪ್ರತಿಷ್ಠಾ ಕಾರ್ಯಕ್ರಮ

0

ಪುತ್ತೂರು: “ನಿನ್ನ ಕೆಲಸ ಮಲ್ಪು, ಯಾನುಲ್ಲೆ..” ಇದು ನರಿಮೊಗರು ಗ್ರಾಮದ ಎಲಿಕಾದ ಶ್ರೀ ವರಮಹಾಲಕ್ಷ್ಮೀ ಸದನ ಮನೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಶ್ರೀ ಸತ್ಯದೇವತೆ ಪಾಷಾಣಮೂರ್ತಿಯು ನಂಬಿ ಬಂದ ಭಕ್ತರಿಗೆ ನೀಡುವ ಅಭಯ.


ಹರಕೆ ಹೊತ್ತ ಒಂದು ತಿಂಗಳ ಒಳಗಾಗಿ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗಿ ಇಷ್ಟಾರ್ಥಗಳು ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಇದೀಗ ಈ ದೈವಸ್ಥಾನದ ವರ್ಷಾವಧಿ ನೇಮೋತ್ಸವ, ಪ್ರತಿಷ್ಠಾ ಕಾರ್ಯಕ್ರಮ ಫೆ.15 ಮತ್ತು 16 ರಂದು ನಡೆಯಲಿದೆ.


ಫೆ.15 ರಂದು ಬೆಳಗ್ಗೆ 10.15ಕ್ಕೆ ಪ್ರತಿಷ್ಠಾ ಕಾರ್ಯಕ್ರಮ, ನವಕಲಶ ಹಾಗೂ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ವೇ.ಮೂ. ಹರಿಪ್ರಸಾದ್ ಭಟ್ ಬನಾರಿ ಪೌರೋಹಿತ್ಯದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಶಶಾಂಕ ನೆಲ್ಲಿತ್ತಾಯ ಕೊಂಬೆಟ್ಟು ಮಧ್ಯಸ್ಥರಾಗಿದ್ದು, ಭಾಸ್ಕರ ಶೆಟ್ಟಿ ಊರಮಾಲ್ ದರ್ಶನ ಪಾತ್ರಿಯಾಗಿದ್ದಾರೆ.


ಫೆ.16 ರಂದು ಸಂಜೆ 5 ಗಂಟೆಗೆ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಇದೇ ವೇಳೆ, ವಿಷ್ಣುನಗರ ಕುಂಡಡ್ಕದ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದ್ದು, ನಂತರ ಇರ್ದೆ ಶ್ರೀ ವಿಷ್ಣುಸಿಂಗಾರಿ ಮೇಳದಿಂದ ಚೆಂಡೆವಾದನ ನಡೆಯಲಿದೆ. ಸಂಜೆ 7 ಗಂಟೆಗೆ ದೈವಗಳ ಭಂಡಾರ ತೆಗೆಯುವುದು ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ಗಂಟೆಗೆ 17ನೇ ವರ್ಷದ ಕಲ್ಲುರ್ಟಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ತಾವೆಲ್ಲರೂ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೈಗಳ ಕೃಪೆಗೆ ಪಾತ್ರರಾಗಬೇಕಾಗಿ ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್, ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಹೂವಿನ ಪೂಜೆ, ಕಲಶ ಸ್ನಾನ, ಅಗೇಲು ಸೇವೆ, ತಂಬಿಲ ಸೇವೆ, ರಕ್ಷೆ, ಅನ್ನಸಂತರ್ಪಣೆ, ಹರಿಕೆ ಹಾಗೂ ಮಾಣಿಚ್ಚಿಲ್ ಸೇವೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 9741640053, 9743170053 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here