






ಕಡಬ: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ, ಆಲಂಕಾರು ಗ್ರಾಮ ಪಂಚಾಯತ್‌ನ ಸಹಯೋಗದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಎಂಡೋಸಂತ್ರಸ್ತರ ಮತ್ತು ವಿಶೇಷಚೇತನರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರ ಫೆ.17ರಂದು ನಡೆಯಿತು.


ಶಿಬಿರದಲ್ಲಿ ಸಾಮಾನ್ಯ ರೋಗದ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಕಣ್ಣಿನ ತಜ್ಞರು, ಕಿವಿ, ಮೂಗು, ಗಂಟಲು ತಜ್ಞ ವೈದ್ಯರುಗಳು ಎಂಡೋ ಸಂತ್ರಸ್ತರು ಮತ್ತು ವಿಶೇಷಚೇತನರ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಲಂಕಾರು, ಪೆರಾಬೆ ಮತ್ತು ಕುಂತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೋಪೀಡಿತರು ಹಾಗೂ ವಿಶೇಷಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡರು.




ಆಲಂಕಾರು ಆರೋಗ್ಯ ಸಮುದಾಯ ಸುರಕ್ಷಾಧಿಕಾರಿ ಬಿನ್ಸಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀಲಾವತಿ, ಆಲಂಕಾರು ಗ್ರಾಮದ ಜಲಜ, ಎಂಡೋ ಸಂತ್ರಸ್ತರು ಮತ್ತು ವಿಶೇಷಚೇತನರು, ಆಲಂಕಾರು, ಕುಂತೂರು ಮತ್ತು ಪೆರಾಬೆ ಗ್ರಾಮದ ಆಶಾ ಕಾರ್ಯಕರ್ತೆಯರು, ವಿಶೇಷಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಆಲಂಕಾರು ಗ್ರಾ.ಪಂ.ನ ಮೋನಪ್ಪ ಬರೆಪುದೇಲು ಸಹಕರಿಸಿದರು.









