ಕಾವು: ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ

0

ಕಾವು: ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿ ಮಂಗಳೂರು ಮತ್ತು ಬಿಎಂಎಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಕೃಷಿ ಮಜ್ದೂರ್ ಸಂಘ ಇದರ ವತಿಯಿಂದ ಮಾಡ್ನೂರು ಗ್ರಾಮದ ಕೊಚ್ಚಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್‌ರವರ ರಬ್ಬರ್ ತೋಟದಲ್ಲಿ 10 ದಿನಗಳ ಕಾಲ ನಡೆದ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮವು ಫೆ.12ರಂದು ನಡೆಯಿತು.


ತರಬೇತಿಯ ಸಮಾರೋಪ ಸಮಾರೋಪ ಕಾರ್ಯಕ್ರಮವು ತಮಿಳು ಸಂಸ್ಕೃತಿ ಮತ್ತು ಶೈಕ್ಷಣಿಕ ಉತ್ತೇಜನ ಟ್ರಸ್ಟ್‌ನ ಪೇರುಮಲ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ರಬ್ಬರ್ ಮಂಡಳಿಯ ಅಭಿವೃದ್ಧಿ ಅಧಿಕಾರಿ ಟೋನಿ ಮೈಕಲ್‌ರವರು ರಬ್ಬರು ಮಂಡಳಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪಿಂಗ್ ಕೃಷಿ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ರಘುಪತಿರವರು ಮಾತನಾಡಿ ಸಂಘದ ಉದ್ದೇಶ ಮತ್ತು ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳ ಮಾಹಿತಿ ನೀಡಿದರು. ಪುತ್ತೂರು ತಾಲೂಕು ಅಧ್ಯಕ್ಷ ಅಮೃತಲಿಂಗಂ ಕಾವು, ಸುಳ್ಯ ತಾಲೂಕು ಅಧ್ಯಕ್ಷ ಶಶಿಕುಮಾರ್, ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ್ ರಾಜ್, ಜಿಲ್ಲಾ ಕಾರ್ಯದರ್ಶಿ ನಾಗೇಂದ್ರನ್, ವಲಯಾಧ್ಯಕ್ಷ ಸೇಲ್ವಕುಮಾರ್ ಕನಕಮಜಲು,
ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್, ತಾಲೂಕು ವೀಕ್ಷಣಾಧಿಕಾರಿ ನಿರನ್ ರೈ. ಮತ್ತು ತೋಟದ ಮಾಲೀಕ ಅಬ್ದುಲ್ ರಹಿಮಾನ್ ಕೆ ಎಸ್, ರಬ್ಬರ್ ತರಬೇತುದಾರರಾದ ಸತ್ಯ ತ್ಯಾಗ ಮೂರ್ತಿರವರು ಉಪಸ್ಥಿತರಿದ್ದರು. ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಿ ಪ್ರಮಾಣ ಪತ್ರ ವಿತರಿಸಲಾಯಿತು. ಶ್ರೀಮತಿ ಮಣೀಮೆಗಳ ಕನಕಮಜಲು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here