ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಂಘದಿಂದ ವಿಶೇಷ ಉಪನ್ಯಾಸ

0


ಪುತ್ತೂರು: ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ಕನ್ನಡ ಸಂಘದಿಂದ ‘ಸಮಕಾಲೀನ ವಿದ್ಯಮಾನಗಳು ಮತ್ತು ಯುವಜನತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಇತಿಹಾಸ ತಜ್ಞ, ಸಾಹಿತಿ, ಖ್ಯಾತ ವಾಗ್ಮಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ. ಬಿ ಶೆಟ್ಟಿಯವರು ಪದವಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಸಮಕಾಲೀನ ವಿದ್ಯಮಾನಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವಿದ್ಯಾಭ್ಯಾಸ ಎಂದರೆ ಕೇವಲ ಪುಸ್ತಕದ ಓದು ಅಲ್ಲ ಬದಲಾಗಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದು ಘಟನೆಯಲ್ಲೂ ಅಡಗಿ ಕೊಂಡಿರುವ ರಾಜಕೀಯವನ್ನು ಅರಿಯುವ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಓದು ಅರ್ಥವತ್ತಾಗುವುದು. ಭಗವದ್ಗೀತೆ,ಬೈಬಲ್,ಕುರ್ಆನ್ ಇತ್ಯಾದಿ ಧರ್ಮ ಗ್ರಂಥಗಳನ್ನು ಎಷ್ಟು ನಿಷ್ಠೆಯಿಂದ ಓದುತ್ತೇವೆಯೋ ಅದೇ ನಿಷ್ಠೆಯೊಂದಿಗೆ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡಾಗ ನಮ್ಮೆಲ್ಲರ ಬದುಕು ಅತ್ಯಂತ ಸ್ಪಷ್ಟವಾದ ಸಾಮರಸ್ಯ ಹೊಂದಿದ ಬದುಕಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಾಹಿತ್ಯದ ಒಲವನ್ನು ಲೋಕಜ್ಞಾನದ ಪುಸ್ತಕಗಳನ್ನು ಓದುವ ಮೂಲಕ ಬೆಳೆಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.

ಬಳಿಕ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ನಡೆಸಲಾಯಿತು. ವಿಚಾರ ಶಕ್ತಿಯೇ ಮನುಷ್ಯನ ನಿಜವಾದ ಆಸ್ತಿ ಎಂಬುದನ್ನು ಈ ಉಪನ್ಯಾಸ ಕಾರ್ಯಕ್ರಮ ಸಾಬೀತುಪಡಿಸಿತು.
ಇತ್ತೀಚೆಗೆ ಬಿಡುಗಡೆಗೊಂಡ ಅಳವು ಅರಿಯದ ಭಾಷೆ-ಕಲೆ, ಸಮಾಜ, ಇತಿಹಾಸ ಎಂಬ ಬೃಹತ್ ಅಧ್ಯಯನಾತ್ಮಕ ಕೃತಿಯನ್ನು ಕಾಲೇಜು ಲೈಬ್ರರಿಗೆ ಉಡುಗೊರೆಯಾಗಿ ನೀಡಿದರು.
ವೇದಿಕೆಯಲ್ಲಿ ಅನುಗ್ರಹ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್, ಖಜಾಂಜಿ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ , ಕನ್ನಡ ಸಂಘದ ಪದಾಧಿಕಾರಿ ರೇಷ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳಾದ ಅಮರ್ ಮತ್ತು ಧನುಷ್ ರವರು ಕೂಡ ಭಾಗವಹಿಸಿದ್ದರು. ಬೋಧಕ ಬೋಧಕೇತರ ವೃಂದದವರು ಭಾಗವಹಿಸಿದ ಈ ಕಾರ್ಯಕ್ರಮಕದಲ್ಲಿ ಪ್ರಥಮ ಬಿ.ಸಿ.ಎ.ವಿಭಾಗದ ಕು.ಫಾತಿಮಾ ನಾಫಿಯಾ ಕಿರಾಅತ್ ಪಠಿಸಿದರು. ಕನ್ನಡ ಭಾಷಾ ವಿಭಾಗದ ಉಪನ್ಯಾಸಕಿ
ರೇಷ್ಮಾ ಧನ್ಯವಾದ ಸಮರ್ಪಿಸಿದರು. ದ್ವಿತೀಯ ಬಿ.ಎ. ವಿಭಾಗದ ಕುಮಾರಿ ಫಾತಿಮತ್ ಶಮಿಯ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here