ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಅಂಗವಾಗಿ ಅಗೇಲು ಸೇವೆ

0

ಬಡಗನ್ನೂರು: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಅಂಗವಾಗಿ ಸ್ವಾಮಿ ಕೊರಗಜ್ಜನಿಗೆ ಅಗೇಲು ಸೇವೆ ಹಾಗೂ ಶ್ರೀ ಗುಳಿಗರಾಜನಿಗೆ ಕಲಶ ಸೇವೆ ನಡೆದು ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಊರ ಪರವೂರ ಭಕ್ತಾಧಿಗಳಿಂದ ವಿವಿಧ ಹರಕೆ ರೂಪದಲ್ಲಿ ಸುಮಾರು 132 ಅಗೇಲು ಸೇವೆ ಮತ್ತು ಕಲಶ ಸೇವೆ ನಡೆಯಿತು. ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು. ಸುಮಾರು 600ಕ್ಕೂ ಮಿಕ್ಕಿ ಭಕ್ತಾದಿಗಳು ಪ್ರಸಾದ ಭೋಜನ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಕೊರಗಜ್ಜ ಸೇವ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ರೖೆ ಬೊಳಕೂಡ್ಲು, ಜತೆ ಕಾರ್ಯದರ್ಶಿ ವಿನಾಯ ಕುಮಾರ್ ದೇವಸ್ಯ ಕೋಶಾಧಿಕಾರಿ ಭಾಸ್ಕರ ಹೆಗಡೆ, ಪೂಜಾಕರ್ಮಿ ಮಾಧವ ಸಾಲಿಯಾನ್ ಹಾಗೂ ಸಮಿತಿ ಸದಸ್ಯರು ಮತ್ತು ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

ಫೆ. 21 ಸುದರ್ಶನ ಹೋಮ 
ಕ್ಷೇತ್ರದಲ್ಲಿ ನಡೆದ  ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಕ್ಷೇತ್ರದಲ್ಲಿ ಫೆ.21ರ ಶನಿವಾರ ಸಂಜೆ  ಗಂ 6ರಿಂದ ಸುದರ್ಶನ ಹೋಮ ನಡೆಯಲಿರುವುದು. ಈ ಪುಣ್ಯ ಕಾರ್ಯಕ್ರಮದಲ್ಲಿ  ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಕ್ಷೇತ್ರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೖೆವ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here