






ತಂದೆ ತಾಯಿಯ ಆಶೀರ್ವಾದದಿಂದ ದೇವರ ಆಶೀರ್ವಾದವೂ ಸಿಗುತ್ತದೆ- ಅಶೋಕ್ ಕುಮಾರ್ ರೈ
ಹಲವರು ಹೋರಾಟಗಳಿಂದ ಹಿಂದೂ ಧರ್ಮ ಶಕ್ತಿಯಾಗಿ ನಿಂತಿದೆ- ಅರುಣ್ ಕುಮಾರ್ ಪುತ್ತಿಲ


ಪುತ್ತೂರು: ಬೆಳ್ಳಿಪ್ಪಾಡಿ ಕೋರಿಯ ಶ್ರೀಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವ ಕಾರ್ಯಕ್ರಮದ ಪ್ರಯುಕ್ತ ಫೆ.16ರಂದು ಸಭಾ ಕಾರ್ಯಕ್ರಮ ನಡೆಯಿತು.




ಮುಖ್ಯ ಅತಿಥಿಯಾಗಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ದೇವರ ಸೃಷ್ಟಿಯಂತೆ ಜಗತ್ತು ನಡೆಯುತ್ತದೆ. ದೇವರು ನಮ್ಮ ಮನೆಯಲ್ಲಿಯೇ ಇರುತ್ತಾರೆ. ನಮ್ಮ ತಂದೆ ತಾಯಿ ಮಾತನಾಡುವ ದೇವರು. ಅವರ ಆಶೀರ್ವಾದ ಮೊದಲು ಸಿಗಬೇಕು. ಆಗ ದೇವರ ಆಶೀರ್ವಾದ ಸಿಗುತ್ತದೆ ಎಂದರು. ನನ್ನಲ್ಲಿ ಕೆಲಸ ಆಗಬೇಕಾದರೆ ಬನ್ನಿ. ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ ಎಂದರು.

ಪುತ್ತಿಲ ಪರಿವಾರ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ದೈವಸ್ಥಾನದ ಪುನರ್ನಿರ್ಮಾಣ ಮಾಡಿದ್ದೀರಿ. ಸನಾತನವಾದ ಹಿಂದೂ ಧರ್ಮಕ್ಕೆ ಶಕ್ತಿ ಕೊಡುವ ಕೆಲಸ ಆದಾಗ ಮುಂದಿನ ಜನಾಂಗ ಸುಸಂಸ್ಕೃತಿಯಾಗಿ ಬೆಳೆಯಲು ಸಾಧ್ಯ. ಧಾರ್ಮಿಕ ಪರಂಪರೆ ಉಳಿಸುವ ಯೋಚನೆಯಡಿಯಲ್ಲಿ ಹಲವರು ಹೋರಾಟಗಳು ನಡೆದರೂ ಹಿಂದೂ ಧರ್ಮ ಶಕ್ತಿಯಾಗಿ ನಿಂತಿದೆ ಎಂದ ಅವರು ಮಣ್ಣಿನ ಋಣವನ್ನು ತೀರಿಸಲು ನಮ್ಮ ಹಿಂದೂ ಧರ್ಮವನ್ನು ಉಳಿಸುವ ಸಂಕಲ್ಪ ಮಾಡೋಣ ಎಂದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ, ಅಧ್ಯಕ್ಷ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಕೋಡಿಂಬಾಡಿ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೇಶ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಗೌಡ ಕಂಬಳತ್ತಡ್ಡ, ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಕೇಶವ ಭಂಡಾರಿ ಕೈಪ, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯ ರಾಮಚಂದ್ರ ಪೂಜಾರಿ, ಪುಷ್ಪಾಲೋಕಯ್ಯ ನಾಯ್ಕ ಕೊಡಿಮರ, ಮೋಹಿನಿ ಜನಾರ್ಧನ ಗೌಡ, ಮಾಜಿ ಸದಸ್ಯ ಮೋನಪ್ಪ ಗೌಡ ಪಮ್ಮನಮಜಲು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ರೈ, ಚಂದನ್ ಗೌಡ ತೆಂಕಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಡಿಂಬಾಡಿ ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಗುಂಡೋಳೆ ಸ್ವಾಗತಿಸಿ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ನೃತ್ಯವೈಭವ ನಡೆಯಿತು. ಸಭಾಕಾರ್ಯಕ್ರಮ ಬಳಿಕ ಮೊಗೇರ್ಕಳ ಗರಡಿ ಇಳಿಯುವುದು, ಅನ್ನಸಂತರ್ಪಣೆ, ತನ್ನಿಮಾನಿಗ ಗರಡಿ ಇಳಿಯವ ಕಾರ್ಯಕ್ರಮ ನಡೆಯಿತು.










