






ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಧ್ಯೇಯವಾಕ್ಯವೆನಿಸಿದ ಒಳ್ಳೆಯದಕ್ಕಾಗಿ ಒಗ್ಗೂಡೋಣ ಎಂಬಂತೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಹಾಗೂ ರೋಟರಿ ಕ್ಲಬ್ ಟೆಂಪಲ್ ಟೆರೇಸ್ ಫ್ಲೋರಿಡಾ ಇದರ ಆಶ್ರಯದಲ್ಲಿ ರೂ.4.5 ಲಕ್ಷ ವೆಚ್ಚದಲ್ಲಿ ಸುಧಾರಿತ ಭೌತಚಿಕಿತ್ಸೆ(ಫಿಸಿಯೋಥೆರಪಿ)ಯ ಯಂತ್ರದ ದೇಣಿಗೆ(ನ್ಯೂಮ್ಯಾಟಿಕ್ ರೇಡಿಯಲ್ ಎಕ್ಸ್‌ಟ್ರಾಕಾರ್ಪೋರಿಯಲ್ ಶಾಕ್‌ವೇವ್ ಥೆರಪಿ ಯಂತ್ರ)ವನ್ನು ಪುತ್ತೂರು ಸರ್ಕಾರಿ ಫಿಸಿಯೋಥೆರಪಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡುವ ಕಾರ್ಯಕ್ರಮವು ಫೆ.21 ರಂದು ಸಂಜೆ ಜರಗಲಿದೆ.


Extracorporeal Shockwave Therapy (ESWT) ಎಂದರೆ ದೇಹದ ಹೊರಭಾಗದಿಂದ (Extracorporeal) ವಿಶೇಷ ಯಂತ್ರದ ಮೂಲಕ ಶಾಕ್‌ವೇವ್ (ಉಚ್ಚ ಶಕ್ತಿ ಧ್ವನಿ ಅಲೆಗಳು) ನೀಡುವ ಚಿಕಿತ್ಸೆ ವಿಧಾನ. ಇದು ಮುಖ್ಯವಾಗಿ ನೋವು ಕಡಿಮೆ ಮಾಡಲು, ಉರಿಯೂತ ತಗ್ಗಿಸಲು ಹಾಗೂ ಗಾಯಗೊಂಡ ಭಾಗದಲ್ಲಿ ರಕ್ತ ಪ್ರವಾಹ ಹೆಚ್ಚಿಸಲು ಉಪಯೋಗವಾಗುತ್ತದೆ.



ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3181ಇದರ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಗೌರವ ಅತಿಥಿಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ಫಿಸಿಯೋಥೆರಪಿಸ್ಟ್ ಡಾ.ದೀಪಿಕಾ, ಗೌರವ ಉಪಸ್ಥಿತರಾಗಿ ರೋಟರಿ ಜಿಲ್ಲೆ 3181, ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ವಲಯ ಸೇನಾನಿ ಭರತ್ ಪೈರವರು ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಕಾರ್ಯದರ್ಶಿ ನವೀನ್ ರೈ ಪಂಜಳ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advanced Pneumatic Radial Shockwave Therapy ಎಂದರೇನು?..
ಇದು ESWT ನ ಒಂದು ವಿಧ. “Pneumatic” ಅಂದರೆ ಗಾಳಿಯ ಒತ್ತಡದಿಂದ ಕಾರ್ಯನಿರ್ವಹಿಸುವ ಯಂತ್ರ. “Radial” ಅಂದರೆ ಅಲೆಗಳು ಹೊರಗೆ ವೃತ್ತಾಕಾರವಾಗಿ ಹರಡುತ್ತವೆ. ಇದು ಸಾಮಾನ್ಯವಾಗಿ ಸ್ನಾಯು ಮತ್ತು ಕೀಲು ಸಂಬಂಧಿತ ಸಮಸ್ಯೆಗಳಿಗೆ ಬಳಸಲಾಗುತ್ತದೆ.
ಯಾವ ಸಮಸ್ಯೆಗಳಿಗೆ ಬಳಸುತ್ತಾರೆ?..
*ಪ್ಲಾಂಟರ್ ಫ್ಯಾಸಿಯಾಟಿಸ್ (ಮೆಟ್ಟಿಲು ನೋವು), *ಟೆನ್ನಿಸ್ ಎಲ್ಬೋ / ಗೋಲ್ಫರ್ಸ್ ಎಲ್ಬೋ
*ಶೋಲ್ಡರ್ ಟೆಂಡೊನೈಟಿಸ್ (ಭುಜ ನೋವು), *ಮಂಡಿ ನೋವು, *ಕಾಲಿನ ಹೆಲ್ ಸ್ಪರ್, *ಕುತ್ತಿಗೆ ಹಾಗೂ ಬೆನ್ನು ಸ್ನಾಯು ನೋವು, *ಸ್ಪೋರ್ಟ್ಸ್ ಗಾಯಗಳು, *ಕ್ಯಾಲ್ಸಿಫಿಕೇಶನ್ ಇರುವ ಟೆಂಡನ್ ಸಮಸ್ಯೆಗಳು
ಪ್ರಯೋಜನಗಳು..
*ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ, *ಕಡಿಮೆ ಸಮಯದಲ್ಲಿ ಚಿಕಿತ್ಸೆ, *ರಕ್ತ ಸಂಚಾರ ಹೆಚ್ಚಿಸುತ್ತದೆ, *ಗಾಯ ಗುಣಮುಖವಾಗುವ ಪ್ರಕ್ರಿಯೆ ವೇಗವಾಗುತ್ತದೆ, *ದೀರ್ಘಕಾಲದ ನೋವಿಗೆ ಪರಿಣಾಮಕಾರಿ










