







ನಿಡ್ಪಳ್ಳಿ: ಕರ್ನಪ್ಪಾಡಿ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪ್ರತಿಷ್ಟೆ ಮತ್ತು ನೇಮೋತ್ಸವಕ್ಕೆ ಫೆ.20ರಂದು ಗೊನೆ ಮುಹೂರ್ತ ನಡೆಯಿತು.


ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಕೊಡಮಣಿತ್ತಾಯ ದೈವಸ್ಥಾನ ಪ್ರತಿಷ್ಠಾ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ, ಕಾರ್ಯದರ್ಶಿ ರಾಧಾಕೃಷ್ಣ ಅರ್. ಕೋಡಿ, ಗರಡಿ ಸೇವಾ ಸಮಿತಿ ಹಾಗೂ ದೈವಸ್ಥಾನ ಪ್ರತಿಷ್ಟಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.



ಫೆ.26 ರಂದು ಸಂಜೆ ತಂತ್ರಿಗಳ ಆಗಮನ,ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಪ್ರಸಾದ ವಿತರಣೆ ಅನ್ನಸಂತರ್ಪಣೆ. ಫೆ.27 ರಂದು ಬೆಳಿಗ್ಗೆ ಪ್ರಾರ್ಥನೆ,ಗಂಟೆ 8.05 ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಕೊಡಮಣಿತ್ತಾಯ ದೈವದ ಪ್ರತಿಷ್ಟೆ, ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಮಾ.1ರಂದು ಬೆಳಿಗ್ಗೆ ಗಣಹೋಮ, ಸಂಜೆ ಭಜನೆ, ರಾತ್ರಿ ಗಂಟೆ 7 ರಿಂದ ಭಂಡಾರ ತೆಗೆಯುವುದು. ರಾತ್ರಿ ಗಂಟೆ 10 ರಿಂದ ಕೊಡಮಣಿತ್ತಾಯ ದೈವದ ನೇಮ. ಮಾ.2 ರಂದು ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ರಾತ್ರಿ ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಲಿದೆ.










