ಜೆಸಿಐ ಕೊಕ್ಕಡ ಕಪಿಲಾ ಸಾಮಾನ್ಯ ಸಭೆ

0

ನೆಲ್ಯಾಡಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಫೆಬ್ರವರಿ ತಿಂಗಳ ಸಾಮಾನ್ಯ ಸಭೆಯು ಫೆ.18ರಂದು ಶಿಬರಾಜೆ ಪಾದೆಯಲ್ಲಿ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಕಚೇರಿಯಲ್ಲಿ ಜರುಗಿತು.


ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ವಹಿಸಿದ್ದರು. ಭಾರತೀಯ ಯುವ ಜೆಸಿ ವಿಭಾಗದ ಪದಗ್ರಹಣವನ್ನು ನಡೆಸಲು ನಿರ್ಧರಿಸಲಾಯಿತು. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ. ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕೋಶಾಧಿಕಾರಿ ಪ್ರಜ್ವಲ್ ಲೋಬೊ ಅವರು ವಾರ್ಷಿಕ ಸದಸ್ಯತ್ವ ಶುಲ್ಕದ ಮಾಹಿತಿ ನೀಡಿದರು. ಪೂರ್ವಾಧ್ಯಕ್ಷರಾದ ಸಂತೋಷ್ ಜೈನ್ ಅವರನ್ನು ಯುವ ಜೆಸಿ ವಿಭಾಗದ ನಿರ್ದೇಶಕರನ್ನಾಗಿ ಆರಿಸಲಾಯಿತು. ಇತ್ತೀಚೆಗೆ ನಿಧನರಾದ ಖ್ಯಾತ ವೈದ್ಯ ಡಾ.ಟಿ.ವಿ. ಜೋಸೆಫ್ ಅವರ ಗೌರವಾರ್ಥ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು.

ಮಾರ್ಚ್ ತಿಂಗಳಲ್ಲಿ ವಲಯ ಉಪಾಧ್ಯಕ್ಷರ ಅಧಿಕೃತ ಭೇಟಿಗೆ ತಯಾರಿ ನಡೆಸಲಾಯಿತು. ಜೆಸಿವಾಣಿ ಹಾಗೂ ಧ್ಯೇಯ ವಾಕ್ಯವನ್ನು ಆಯುಷ್ ಜೈನ್ ಅವರು ವಾಚಿಸಿದರು. ವಲಯ ಉಪಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ, ಜಸ್ವಂತ್ ಪಿರೇರಾ, ರೇಷ್ಮಾ ಡಿ ಅಲ್ಮೇಡಾ, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ದಕ್ಷಾ ಜೈನ್, ವಿಕ್ಟರ್ ಸುವಾರಿಸ್, ದೀಪಾ ವಿ., ಲೇಡಿ ಜೆಸಿ ಅಧ್ಯಕ್ಷರಾದ ರೇಶ್ಮ ಡಿಸೋಜ, ಯುವ ಜೆಸಿ ಅಧ್ಯಕ್ಷರಾದ ಆದ್ಯಾ ಜೈನ್, ಧನುಷ್ ಕುಮಾರ್ ಜೈನ್, ಅಕ್ಷತ್ ರೈ, ನಿತ್ಯಾನಂದ ರೈ, ವಿದ್ಯೇಂದ್ರ ಅವರು ಚರ್ಚೆಯಲ್ಲಿ ಭಾಗವಹಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ಅವರು ವಂದಿಸಿದರು.

LEAVE A REPLY

Please enter your comment!
Please enter your name here