ಮುಕ್ಕೂರು : ನೇಸರ ದಶಪ್ರಣತಿ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆ

0

ಪುತ್ತೂರು: ಸವಣೂರು ಸಮೀಪದ ಮುಕ್ಕೂರು ನೇಸರ ಯುವಕ ಮಂಡಲ ಮತ್ತು ನೇಸರ ಯುವತಿ ಮಂಡಲ ಮುಕ್ಕೂರು ಹಾಗೂ ನೇಸರ ದಶಪ್ರಣತಿ ಸಮಿತಿ- 2026 ಇದರ ಆಶ್ರಯದಲ್ಲಿ
ನೇಸರ ದಶಪ್ರಣತಿ ಪ್ರಯುಕ್ತ ರಾಜ್ಯ ಮಟ್ಟದ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗ, ಪಿಯುಸಿ-ಪದವಿ-ಸ್ನಾತಕೋತ್ತರ ಪದವಿ ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಸೇರಿದಂತೆ ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಾ.15 ರಂದು ಕವನ ಕಳಿಸಲು ಕೊನೆಯ ದಿನವಾಗಿದ್ದು ಕವನಗಳನ್ನು 9740189529 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು.

ಸ್ಪರ್ಧೆಯ ನಿಯಮಗಳು
ಸ್ಪರ್ಧೆಗೆ ಕಳುಹಿಸುವ ಕವನಗಳು ಸ್ವತಂತ್ರ ರಚನೆ ಆಗಿರಬೇಕು. ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಬ್ಲಾಗ್, ಸಾಮಾಜಿಕ ಜಾಲತಾಣ, ಅಂತರ್ಜಾಲ ಸೇರಿದಂತೆ ಎಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು. ಕವನಗಳು 20 ಸಾಲುಗಳಿಗಿಂತ ಮೀರದಿರಲಿ. ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಕವನ ರಚಿಸಬಹುದು. ವಿಷಯದ ನಿರ್ಬಂಧ ಇರುವುದಿಲ್ಲ. ಸಮಾಜದ ಆರೋಗ್ಯಕ್ಕೆ ಧಕ್ಕೆ ಬಾರದಂತಹ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕವನಗಳು ಯೂನಿಕೋಡ್‌ ತಂತ್ರಾಂಶದಲ್ಲಿ ಇರಬೇಕು. ಕವನ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಫೋನ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು. ಸ್ಪರ್ಧೆಗೆ ಕಳುಹಿಸಿರುವ ರಚನೆಗಳನ್ನು ಹಿಂದಿರುಗಿಸುವುದಿಲ್ಲ. ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಕವನಗಳಿಗೆ ಆಕರ್ಷಕ ಬಹುಮಾನವಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮ. ನಿಮ್ಮ ಕವನವನ್ನು 15-03-2026 ರ ಒಳಗಾಗಿ 9740189529 ವಾಟ್ಸಪ್ ಸಂಖ್ಯೆಗೆ ಕಳುಹಿಸಿ. ಕರ್ನಾಟಕ ರಾಜ್ಯ ಹಾಗೂ ಕಾಸರಗೋಡು ಜಿಲ್ಲೆಯವರು ಕವನ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

LEAVE A REPLY

Please enter your comment!
Please enter your name here