







ಪುತ್ತೂರು: ಪೆರ್ಣೆ ಶ್ರೀಮುಚ್ಚಿಲೋಟ್ ಭಗವತೀ ಕ್ಷೇತ್ರ ವ್ಯಾಪ್ತಿಯ ವಾಣಿಯನ್-ಗಾಣಿಗ ಸಮುದಾಯ ಬಾಂಧವರ ಎಂಟು ತಂಡಗಳ ನಿಗದಿ ಓವರ್‌ಗಳ ಓವರ್ ಆರ್ಮ್ ಲೀಗ್ ಕ್ರಿಕೆಟ್ ಪಂದ್ಯಾಟ ಮುಚ್ಚಿಲೋಟ್ ಕ್ರಿಕೆಟ್ ಲೀಗ್' ಎಂಸಿಎಲ್ 2026 ಫೆ.22ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.


ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರೋಪಾಡಿ ತರವಾಡು ಮನೆಯ ರಾಮಕೃಷ್ಣ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಿಂದೂ ಚಿಂತಕರು ಹಾಗೂ ಅಂತರ್ಜಲ ಶೋಧಕರಾದ ಚಂದ್ರಹಾಸ ಮುರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕರಾದ ರಾಜೇಶ್ ಈಶ್ವರಮಂಗಲ ಹಾಗೂ ಎಂಸಿಎಲ್ ನಿರ್ದೇಶಕ ಮಹೇಶ್ ಪಿ. ಉಪಸ್ಥಿತರಿದ್ದರು. ಚಲನಚಿತ್ರ ನಟ. ಪ್ರಸ್ತುತ ಜೀ ಕೇರಳಂ ವಾಹಿನಿಯ ಜನಪ್ರಿಯದುರ್ಗಾ’ ಧಾರಾವಾಹಿಯ ನಾಯಕ ನಟ ಕೌಶಿಕ್ ರಾಮ ಪಾಟಾಳಿ ಆಕರ್ಷಕ ಟ್ರೋಫಿಯನ್ನು ಅನಾವರಣಗೊಳಿಸಿದರು. ನಾಗೇಶ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.




ಫಲಿತಾಂಶ
ಪಂದ್ಯಾಟದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅರ್ಜುನ ವಾರಿಯರ್ಸ್ ತಂಡವು ಚಾಂಪಿಯನ್ ಆಗಿ ರೂ.25,000 ನಗದು ಹಾಗೂ ಎಂಸಿಎಲ್ ಟ್ರೋಫಿ ಪಡೆದುಕೊಂಡಿತ್ತು. ಸಾಮ್ರಾಟ್ ಮಾಂಬಾಡಿ ಶ್ರೇಷ್ಠ ಹೋರಾಟದೊಂದಿಗೆ ರನ್ನರ್-ಅಪ್ ಆಗಿ ರೂ.15,000 ನಗದು ಮತ್ತು ಟ್ರೋಫಿ, ವಾಣಿಯನ್ ವಾರಿಯರ್ಸ್ ಪುತ್ತೂರು ಸೆಕೆಂಡ್ ರನ್ನರ್-ಅಪ್ ಮತ್ತು ಸ್ಟೆçöÊಕರ್ಸ್ ಇಲೆವೆನ್ ಸುಳ್ಯ 4ನೇ ಸ್ಥಾನ ಪಡೆದುಕೊಂಡಿತು.
ಪಂದ್ಯಾಟದಲ್ಲಿ ವೈಯಕ್ತಿಕ ಸಾಧನೆ ಮಾಡಿದ ಆಟಗಾರರಾದ ಅರ್ಜುನ್ ವಾರಿಯರ್ಸ್ ತಂಡದ ಸುನಿಲ್ ಪಂಜ ಸರಣಿ ಶ್ರೇಷ್ಠ ಹಾಗೂ ಅತ್ಯುತ್ತಮ ಬೌಲರ್ ಪ್ರಶಸ್ತಿ, ಸಾಮ್ರಾಟ್ ಮಾಂಬಾಡಿ ತಂಡದ ಅನೀಶ್ ಎನ್.ಹೆಚ್ ಅತ್ಯುತ್ತಮ ಬ್ಯಾಟರ್ ಹಾಗೂ ಅತೀ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ, ಮನು ಕರ್ಲಪ್ಪಾಡಿ ಉದಯೋನ್ಮುಖ ಆಟಗಾರನಾಗಿ, ನಿರ್ಮಲ್ ಜಿ.ಪಿ. ಅತ್ಯುತ್ತಮ ಫೀಲ್ಡರ್, ಪಾಟಾಳಿ ಚಾಲೆಂಜರ್ಸ್ ಮಂಗಳೂರು ತಂಡದ ಶಶಿಧರ್ ಕೆ. ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿ, ವಾಣಿಯನ್ ವಾರಿಯರ್ಸ್ ಪುತ್ತೂರು ತಂಡದ ಅಭಿ ಅಡ್ಕಾರ್ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ, ಕ್ರೀಡಾ ಮನೋಭಾವ ಮೆರೆದ ವಾಣಿಯನ್ ವಾರಿಯರ್ಸ್ ಪುತ್ತೂರು ತಂಡವು ‘ಫೇರ್ ಪ್ಲೇ’ ಪ್ರಶಸ್ತಿ ಪಡೆಯಿತು.
ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಎಂಸಿಎಫ್‌ನ ಸೇಫ್ಟೀ ಮ್ಯಾನೇಜರ್ ರವಿಚಂದ್ರ ಪದವಿನಂಗಡಿ ಮಾತನಾಡಿ, ಯುವ ಆಟಗಾರರ ಜೊತೆಗಿನ ಆಟ ಮತ್ತು ಪರಿಚಯವು ನನಗೆ ಖುಷಿ ನೀಡಿದ ಕ್ಷಣಗಳು, ಅವರ ಉತ್ಸಾಹ ನೋಡಿ ಸಂತೋಷವಾಯಿತು ಎಂದು ಹೇಳಿದರು.
ಸೆಲ್ಕೋ ಸೋಲಾರ್‌ನ ಏರಿಯಾ ಮ್ಯಾನೇಜರ್ ಹಾಗೂ ಪುತ್ತೂರು ವಾಣಿಯನ್-ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಮಾತನಾಡಿ, ಯುವಕರು ಕೈಗೊಳ್ಳುವ ಪ್ರತಿಯೊಂದು ಉತ್ತಮ ಮುಂದಾಳತ್ವಕ್ಕೂ ನಾವು ಸಂಪೂರ್ಣ ಬೆಂಬಲ ನೀಡಲು ಸಿದ್ಧ; ನೀವು ಮುಂದಾಗಿರಿ, ನಾವು ನಿಮ್ಮ ಜೊತೆಯಲ್ಲೇ ಇರುತ್ತೇವೆ ಎಂದು ಭರವಸೆ ನೀಡಿದರು. ಆಪಲ್ ಕಂಪನಿಯ ಇಂಜಿನಿಯರ್ ದೀಕ್ಷಿತ್ ಬೆಳ್ಳಾರೆ ಮಾತನಾಡಿ, ಈ ಪಂದ್ಯಾಟದಿಂದ ಬೆಳೆದ ಒಡನಾಟವು ಇಲ್ಲಿಗೆ ಸೀಮಿತವಾಗಿರದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ಒಟ್ಟಾಗಿ ಕೆಲಸ ಮಾಡಿ, ಪರಸ್ಪರ ಕೈಹಿಡಿದು ಬೆಂಬಲಿಸುತ್ತಾ ಮುಂದೆ ಸಾಗೋಣ ಎಂದು ಕರೆ ನೀಡಿದರು.
ಮುತ್ತೂಟ್ ಕ್ಯಾಪಿಟಲ್ ಮ್ಯಾನೇಜರ್ ಗುರುರಾಜ್ ಸೀತಾಂಗೋಳಿ, ಎಂಸಿಎಲ್ ನಿರ್ದೇಶಕ ಅಭಿಲಾಶ್ ಮಾಂಬಾಡಿ, ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಪಂಜತೊಟ್ಟಿ, ಈಶಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ, ಹಾಗೂ ರಿಲಯನ್ಸ್ ಜಿಯೋ ಸೀನಿಯರ್ ಮ್ಯಾನೇಜರ್ ಹರೀಶ್ ಅರಂತಡ್ಕ ಅತಿಥಿಗಳಾಗಿ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ದಿನಕರ ಅಳಿಕೆ ಸ್ವಾಗತಿಸಿದರು. ಸಂದೀಪ್ ಮಹಾಬಲಡ್ಕ ಮತ್ತು ಕೃಷ್ಣ ಮಾಂಬಾಡಿ, ಸೌಮ್ಯ ಕಡಮಜಲು ಕಾರ್ಯಕ್ರಮ ನಿರೂಪಿಸಿದರು. ಮನೋಹರ್ ಪುತ್ತೂರು ವಂದಿಸಿದರು.
ಆಟಗಾರರಿಗೆ ಮತ್ತು ಅಭಿಮಾನಿಗಳು ಹಾಗೂ ವೀಕ್ಷಣೆಗೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಬೆಳಿಗ್ಗೆ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆಯ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪ್ರಖರ ಬಿಸಿಲಿನ ನಡುವೆಯೂ ಎಲ್ಲರಿಗೂ ಅನಿಯಮಿತ ಕಲ್ಲಂಗಡಿ ಹಣ್ಣಿನ ರಸದೌತಣ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಂದ್ಯಾಟದಲ್ಲಿ ಅರ್ಜುನ್ ವಾರಿಯರ್ಸ್, ಆಧಿ ಸ್ಟ್ರೈಕರ್ಸ್ ಕುಂಬ್ಳೆ, ಸ್ಟ್ರೈಕರ್ಸ್ ಇಲೆವೆನ್ ಸುಳ್ಯ, ಯುಕೆ ಫೈಟರ್ಸ್, ಸಾಮ್ರಾಟ್ ಮಾಂಬಾಡಿ, ಪಾಟಾಳಿ ಚಾಲೆಂಜರ್ಸ್ ಮಂಗಳೂರು, ವಾಣಿಯನ್ ವಾರಿಯರ್ಸ್ ಪುತ್ತೂರು ಹಾಗೂ ಭಗವತಿ ಕನ್‌ಸ್ಟçಕ್ಷನ್ ತಂಡಗಳು ಭಾಗವಹಿಸಿದ್ದವು.










