ಮಹಿಳಾ ಮಂಡಲಗಳ ಒಕ್ಕೂಟದಿಂದ ವಿಶ್ವ ಮಹಿಳಾ ದಿನಾಚರಣೆಯ ಪೂರ್ವಭಾವಿ ಸಭೆ

0

ಪುತ್ತೂರು:ದಕ್ಷಿಣ ಕನ್ನಡ (ಜಿಲ್ಲಾ) ಮಹಿಳಾ ಮಂಡಲಗಳ ಒಕ್ಕೂಟ (ರಿ.), ಪುತ್ತೂರು ತಾಲೂಕು ಮಹಿಳಾ ಮಂಡಲ , ನವ್ಯ ಶ್ರೀ ಮಹಿಳಾ ಮಂಡಲ, ಲಯನ್ಸ್ ಕ್ಲಬ್, ವನಿತಾ ಸಮಾಜ ಹಾಗೂ ಪ್ರಜ್ಯೋತಿ ಬಳಗ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 8 ರಂದು ಲಯನ್ಸ್ ಸೇವಾ ಮಂದಿರ ಪುತ್ತೂರಿನಲ್ಲಿ ನಡೆಯಲಿರುವ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತದ ಪೂರ್ವಭಾವಿ ಸಭೆ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಉಷಾ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಸಭೆಯಲ್ಲಿ ಸೇರಿದ್ದರು. ಉಷಾ ನಾಯಕ್ ಸ್ವಾಗತಿಸಿ, ವಿಶ್ವ ಮಹಿಳಾ ದಿನಾಚರಣೆ ಸಂಭ್ರಮದಿಂದ ನಡೆಯುವುದಕ್ಕೆ ಎಲ್ಲರ ಸಹಕಾರ ಕೋರಿದರು. ಸಭೆಯಲ್ಲಿ ಗೌರವಾಧ್ಯಕ್ಷರಾದ ಚಂಚಲ ತೊಜೋಮಯ ಅವರು ಪ್ರಜ್ಯೋತಿ ಬಳಗದ (ಸಂಸ್ಥಾಪಕರು) ವತಿಯಿಂದ ಸಹಾಯ ಹಸ್ತವನ್ನು ಪುತ್ತೂರು ತಾಲೂಕಿನ ನೊಂದ ಅಶಕ್ತ, ತೀರ ಬಡತನ, ಆರೋಗ್ಯ ತೊಂದರೆ ಇರುವವರಿಗೂ ನೀಡುವುದಾಗಿ ತಿಳಿಸಿದರು.

ಪುತ್ತೂರು ತಾಲೂಕಿನ ಕಾರ್ಯದರ್ಶಿ ಹರಿಣಾಕ್ಷಿ ಜೆ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು . ಕೋಶಾಧಿಕಾರಿ ಅನುಪಮ ಸಹಕರಿಸಿದರು. ಸಭೆಯಲ್ಲಿ ಪ್ರೇಮಲತಾ ರಾವ್ , ಮನೋರಮ ಉಮೇಶ್, ರೇಖಾ ಶೆಟ್ಟಿ , ವಿದ್ಯಾ ಶ್ರೀ , ಮೀನಾಕ್ಷಿ ಆರ್ ಪೂಜಾರಿ, ಧರ್ಮಾವತಿ ಬಂಟ್ವಾಳ, ಮಂಜುಳ ಹೆಗ್ಡೆ, ಪ್ರೇಮಾ ಕೆಮ್ಮಾಯಿ, ಪವಿತ್ರ ಕೋಡಿಂಬಾಡಿ, ಗಾಯತ್ರಿ ದೇವದಾಸ್, ಪಿ. ಜಯಂತಿ, ಪ್ರೇಮ ರಂಜನ್, ಇಂದಿರಾ, ಕಿಶೋರಿ ದುಗ್ಗಪ್ಪ, ಗೌರಿ ಬನ್ನೂರು, ರಾಜೇಶ್ವರಿ ಮುಲ್ಕಿ, ಕುಶಲ ಮುಲ್ಕಿ ಉಪಸ್ಥಿತರಿದ್ದು, ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here