ಹಿರೇಬಂಡಾಡಿ: ವಾರ್ಷಿಕ ಜಾತ್ರೆ-ದೈವಗಳ ನೇಮೋತ್ಸವ

0

ಹಿರೇಬಂಡಾಡಿ: ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಾರ್ಷಿಕ ಜಾತ್ರೆಯ ಬಳಿಕ ದೈವಗಳ ನೇಮೋತ್ಸವ ಫೆ.25 ಹಾಗೂ 26ರಂದು ನಡೆಯಿತು.


ಫೆ.೨೫ರಂದು ರಾತ್ರಿ ದೈವಗಳ ಭಂಡಾರ ತೆಗೆಯಲಾಗಿತು. ಬಳಿಕ ರಕ್ತೇಶ್ವರಿ, ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು. ರಾತ್ರಿ ಅನ್ನಸಂತರ್ಪಣೆ, ಸಂಸಾರ ಕಲಾವಿದರು ಪುತ್ತೂರು ಇವರು ಅಭಿನಯಿಸುವ ಭಕ್ತಿಪ್ರಧಾನ ಹಾಸ್ಯ ನಾಟಕ ’ನಂಬಿಕೆದಾಯೆ’ ನಡೆಯಿತು. ಫೆ.26ರಂದು ಬೆಳಿಗ್ಗೆ ಶ್ರೀ ದುಗಲಾಯಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಪಡ್ಯೊಟ್ಟು, ಉತ್ಸವ ಸಮಿತಿ ಅಧ್ಯಕ್ಷ ನವೀನ್ ಪಡ್ಪು, ಕಾರ್ಯದರ್ಶಿ ಅಶೋಕ ಹಲಸಿನಕಟ್ಟೆ, ಕೋಶಾಧಿಕಾರಿ ವಿಶ್ವನಾಥ ಕೆಮ್ಮಾಟೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಪ್ಪ ಪೂಜಾರಿ ಪಡ್ಪು, ಸುರೇಶ್ ಕಜೆ, ನಾರಾಯಣ ಶೆಟ್ಟಿ ಹೊಳೆಕೆರೆ, ಗಂಗಾಧರ ಪೂಜಾರಿ ಎಲಿಯ, ಬಾಬು ಅಗರಿ, ವಿದ್ಯಾ ನಿಡ್ಡೆಂಕಿ, ಮೀನಾಕ್ಷಿ ಬೋಳಮೆ, ಬೈಲುವಾರು ಸಮಿತಿ ಸಂಚಾಲಕರು, ಸದಸ್ಯರು, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ, ಗಣೇಶೋತ್ಸವ ಸಮಿತಿ, ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here