






ಪುತ್ತೂರು: ಪ್ರಗತಿಪರ ಸೇವಾ ಸಂಸ್ಥೆ ಮಂಡ್ಯ ಇವರು ಆಯೋಜಿಸಿದ್ದ 21ನೇ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ 2025-26 ಇದರಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಯುಕೆಜಿ ವಿದ್ಯಾರ್ಥಿ ಜಸ್ವಿತ್ರವರು ಭಾಗವಹಿಸಿ ಚಿತ್ರ ಚಿಗುರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಕೆಯ್ಯೂರು ಗ್ರಾಮದ ಮಾಡಾವು ಸಂತೋಷ್ನಗರ ನಿವಾಸಿ ಪತ್ರಕರ್ತ ಗೋಪಾಲಕೃಷ್ಣ ಮತ್ತು ಮೋಹಿನಿಯವರ ಪುತ್ರರಾಗಿದ್ದಾರೆ.












