






ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿಯಾಗಿದ್ದ ಖ್ಯಾತ ಟಿಂಬರ್ ಉದ್ಯಮಿ ದಿ.ಮೇಪ್ರಿ ಇಬ್ರಾಹೀಂ ಹಾಜಿ ಅವರ ಧರ್ಮಪತ್ನಿ ಬೀಫಾತಿಮಾ(85 ವ) ಕೇರಳದ ಕುಂಬಳೆ ಸಮೀಪದ ಮೇಪ್ರಿಯ ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಐವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.












