







ರಾಮಕುಂಜ: ಇಲ್ಲಿನ ನೀರಾಜೆ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ ಎಸ್ಕೆಎಸ್ಬಿವಿ ವತಿಯಿಂದ ಇಫ್ತಾರ್ ಸಂಗಮ ಹಾಗೂ ಅಗಲಿದವರ ಹೆಸರಿನಲ್ಲಿ ಯಾಸೀನ್ ಪಾರಾಯಣ, ದುಆ ಮಜ್ಲಿಸ್ ಕಾರ್ಯಕ್ರಮ ಮಾ.5ರಂದು ನೀರಾಜೆ ನೂರುಲ್ ಹುದಾ ಮಸೀದಿಯಲ್ಲಿ ನಡೆಯಿತು.
ದುಆ ಮಜ್ಲಿಸ್ ನೇತೃತ್ವವನ್ನು ಸ್ಥಳೀಯ ಉಸ್ತಾದರಾದ ಶೌಕತ್ ಅಲಿ ಅಸ್ಲಮಿ ವಹಿಸಿದ್ದರು. ಆಡಳಿತ ಸಮಿತಿ ಅಧ್ಯಕ್ಷರಾದ ಎನ್.ಸಿದ್ದೀಕ್, ನೀರಾಜೆ ನೂರುಲ್ ಹುದಾ ಮದ್ರಸ ಸಹ ಅಧ್ಯಾಪಕರಾದ ಅಬ್ದುಲ್ ಲತೀಫ್ ಫೈಝಿ, ಅಬ್ದುಲ್ ರಝಕ್ ದಾರಿಮಿ, ಇಸ್ಮಾಯಿಲ್ ಖಾಸಿಮಿ ಮುಅಲ್ಲಿಮ್ ಕೊಯಿಲ ಆತೂರು, ಫಾರೂಕ್ ತಂಞಳ್, ನೂರುಲ್ ಹುದಾ ಮದ್ರಸ ಕಾರ್ಯದರ್ಶಿ ಪುತ್ತುಕುಂಞಿ, ಸದಸ್ಯರಾದ ಇಸ್ಮಾಯಿಲ್, ಸಿದ್ಧೀಕ್, ಅಶ್ರಫ್, ಅನ್ಸಾರ್, ವಿಖಾಯ ಚಯರ್ಮೇನ್ ಅಬ್ದುಲ್ ಅಝೀಝ್, ಹೆಚ್.ಅಬ್ದುಲ್ ರಹ್ಮಾನ್, ಎಸ್ಕೆಎಸ್ಬಿವಿ ಅಧ್ಯಕ್ಷ ರಾಝಿ, ಕಾರ್ಯದರ್ಶಿ ಅಲ್ ಅಮೀನ್, ಕೋಶಾಧಿಕಾರಿ ಶಿಹಾಬುದ್ದೀನ್, ಯೆಂಗ್ಮೆನ್ಸ್ ಪದಾಧಿಕಾರಿಗಳು, ಎಸ್ಕೆಎಸ್ಎಸ್ಎಫ್ ಪದಾಧಿಕಾರಿಗಳು, ಸದಸ್ಯರುಗಳು, ಮದ್ರಸ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.













