






ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಪುತ್ತೂರು, ಲಯನ್ಸ್ ಕ್ಲಬ್, ನವ್ಯಶ್ರೀ, ವನಿತಾ ಸಮಾಜ ಹಾಗೂ ಪ್ರಜ್ಯೋತಿ ಬಳಗ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವಮಹಿಳಾ ದಿನಾಚರಣೆ ಮಹಿಳಾ ಸಂಕುಲ-ಪಲ್ಲವ ಮಾ.8ರಂದು ಬೆಳಿಗ್ಗೆ 11.೦೦ಕ್ಕೆ ಪುತ್ತೂರು ರಾಧಾಕೃಷ್ಣ ಮಂದಿರದ ಬಳಿಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.


ಪುತ್ತೂರು ತಾಲೂಕು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಉಷಾ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು ಇದರ ಸ್ನಾತಕೋತ್ತರ ವಿಭಾಗದ ಡೀನ್ ಡಾ| ವಿಜಯ ಸರಸ್ವತಿ . ಬಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ ಉಪಪ್ರಧಾನ ವ್ಯವಸ್ಥಾಪಕರಾದ ಭವಾನಿ ಪ್ರಭು ಮತ್ತು ಜಿಲ್ಲಾ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಮತ್ತು ಪ್ರಜ್ಯೋತಿ ಬಳಗ ಮಂಗಳೂರು ಇದರ ಸಂಸ್ಥಾಪಕರಾದ ಚಂಚಲ ತೇಜೋಮಯ ಇವರುಗಳ ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ. ಲಯನ್ಸ್ ಕ್ಲಬ್ ಮತ್ತು ನವ್ಯಶ್ರೀ ಮಹಿಳಾ ಮಂಡಲ, ಪುತ್ತೂರು ಇದರ ಅಧ್ಯಕ್ಷರಾದ ಲ| ಪ್ರೇಮಲತಾ ರಾವ್ ಮತ್ತು ವನಿತಾ ಸಮಾಜ ಪುತ್ತೂರು ಇದರ ಅಧ್ಯಕ್ಷರಾದ ವತ್ಸಲಾ ರಾಜ್ಞಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಇದರ ಅಧ್ಯಕ್ಷರಾದ ಉಷಾ ನಾಯಕ್, ಗೌರವಾಧ್ಯಕ್ಷರಾದ ಚಂಚಲ ತೇಜೋಮಯ, ಕಾರ್ಯದರ್ಶಿ ರೇಷ್ಮಾ, ಜತೆ ಕಾರ್ಯದರ್ಶಿ ಮಧುಮತಿ ಪಿ. ಬೊಳ್ಳೂರು, ಖಜಾಂಜಿ ರೇಖಾ ಶೆಟ್ಟಿ, ಉಪಾಧ್ಯಕ್ಷೆ ವಿದ್ಯಾ ಕೊಟ್ಟಾರಿ, ಕ್ರೀಡಾ ಕಾರ್ಯದರ್ಶಿ ಮನೋರಮ, ಸಾಂಸ್ಕೃತಿಕ ಕಾರ್ಯದರ್ಶಿ ಜೆಸಿಂತಾ ಮೆಂಡೊನ್ಸ ಹಾಗೂ ಪುತ್ತೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಷಾ ನಾಯಕ್, ಗೌರವಾಧ್ಯಕ್ಷೆ ಪ್ರೇಮಲತಾ ರಾವ್, ಗೌರವ ಸಲಹೆಗಾರರಾದ ವತ್ಸಲಾ ರಾಜ್ಞಿ, ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ಕೋಶಾಧಿಕಾರಿ ಅನುಪಮ, ಉಪಾಧ್ಯಕ್ಷರುಗಳಾದ ಪ್ರೇಮ ಕೆಮ್ಮಾಯಿ, ರಮಣಿ ಗಾಣಿಗ, ಜತೆ ಕಾರ್ಯದರ್ಶಿ ಕಿಶೋರಿ ದುಗ್ಗಪ್ಪ ಹಾಗೂ ಪದಾಧಿಕಕಾರಿಗಳು ಮತ್ತು ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












