ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯಕ್ಷ ಪ್ರಸಾದಿನೀ -2026 ಸಂಪನ್ನ

0

ಪೆರ್ಡೂರು ಮೇಳದ ಯಕ್ಷಗಾನ ವೀಕ್ಷಣೆಗೆ ನಿರೀಕ್ಷೆಗೂ ಮೀರಿದ ಪ್ರೇಕ್ಷಕರಿಂದ ಮೆಚ್ಚುಗೆ
ಯಕ್ಷಗಾನ ಕೇವಲ ಮನರಂಜನೆ ಅಲ್ಲ, ಉಪಾಸನೆ – ಡಾ. ರಾಘವೇಂದ್ರಪ್ರಸಾದ್ ಬಂಗಾರಡ್ಕ

ಪುತ್ತೂರು: ಕಳೆದ ಐದು ವರ್ಷಗಳಿಂದ ನರಿಮೊಗರಿನಲ್ಲಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಅತ್ಯಂತ ಹೆಚ್ಚು ಗೂಗಲ್ ರಿವಿಯೂ ಹೊಂದಿದ್ದು, ತನ್ನ ಸಾರ್ಥಕ ಸೇವಾ ಪ್ರಯಾಣವನ್ನು ಸ್ಮರಿಸಿಕೊಂಡು, ಮತ್ತಷ್ಟು ಸದೃಢವಾಗಿ ಹೊಸ ಸಮಾಜಮುಖಿ ಯೋಜನೆಗಳು ಹಾಗೂ ಸಂಕಲ್ಪಗಳೊಂದಿಗೆ ಮುಂದಡಿಯಿಡುತ್ತಿದ್ದು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ಬೀರುವ ನಮ್ಮ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಈ ಯಕ್ಷ ಪ್ರಸಾದಿನೀ -2026 ಸಂಪನ್ನಗೊಂಡಿದೆ.


‘ಯಕ್ಷ ಪ್ರಸಾದಿನೀ-2026″ ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ಮಾ.3ರಂದು ಸಂಜೆ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ , ಪೆರ್ಡೂರು ಮೇಳ ಇವರಿಂದ , ಪೌರಾಣಿಕ ಕಥಾನಕ “ಕಾರ್ತವೀರ್ಯ -ಚಕ್ರ ಚಂಡಿಕೆ” ಪೌರಾಣಿಕ ಯಕ್ಷಗಾನ ಪ್ರದರ್ಶನ ನರಿಮೊಗರು ಶಾಲಾ ಕ್ರೀಡಾಂಗಣದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಪ್ರಸನ್ನಭಟ್ ಬಾಳ್ಕಲ್ ಭಾಗವತಿಕೆಯೊಂದಿಗೆ ಖ್ಯಾತ ಪಾತ್ರಧಾರಿಗಳ ಭಾಗವಹಿಸುವಿಕೆಯಲ್ಲಿ ನಡೆಯಿತು. ನೀಲ್ಕೋಡು ಶಂಕರ ಹೆಗಡೆ ಕಾರ್ತವೀರ್ಯನಾಗಿ, ಕಾರ್ತಿಕ್ ಚಿಟ್ಟಾಣಿ ಬರ್ಬರಿಕನಾಗಿ , ಸನ್ಮಯ್ ಕೃಷ್ಣ ಮಳವಳ್ಳಿ ಕೃಷ್ಣನಾಗಿ , ನಾಗರಾಜ್ ಭಟ್ ಕುಂಕಿಪಾಲ ವತ್ಸಲೆಯಾಗಿ ಮಿಂಚಿದರು . ಕಾರ್ತವೀರ್ಯನ ಜಲಕ್ರೀಡೆ , ಕೃಷ್ಣ ಬರ್ಬರಿಕ ಸಂಭಾಷಣೆ , ಹಾಡು ನೃತ್ಯ ಮನರಂಜಿಸಿತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಕೊನೆಯವರೆಗೂ ಇದ್ದು ಯಕ್ಷಗಾನ ವೀಕ್ಷಿಸಿದರು. ಬಂದ ಎಲ್ಲರೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಘಟಕ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹಾಗೂ ಡಾ .ಶ್ರುತಿ.ಎಂ.ಎಸ್ . ಎಲ್ಲರನ್ನೂ ಸ್ವಾಗತಿಸಿದರು.


ಯಕ್ಷಗಾನ ಕೇವಲ ಮನರಂಜನೆ ಅಲ್ಲ, ಉಪಾಸನೆ
ಕಾರ್ಯಕ್ರಮದ ಆಯೋಜಕ ಹಾಗೂ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಖ್ಯಾತ ಆಯುರ್ವೇದ ತಜ್ಞವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಮಾತನಾಡಿ “ಚಂದ್ರ ಗ್ರಹಣ ಬರುತ್ತದೆ ಹೋಗುತ್ತದೆ. ಆದರೆ ಮನಸ್ಸು ಬುದ್ಧಿಗಳಿಗೆ ಹಿಡಿದ ಗ್ರಹಣ ಯಾವಾಗಲೂ ಇರುತ್ತದೆ. ಅದಕ್ಕೆ ಮೋಕ್ಷ ನೀಡುವುದಕ್ಕೆ ಯಕ್ಷಗಾನದಂತಹ ಆರಾಧನಾ ಕಲೆಗಳಿಗೆ ಸಾಮರ್ಥ್ಯ ಇದೆ . ಯಕ್ಷಗಾನ ಕೇವಲ ಮನರಂಜನೆ ಅಲ್ಲ, ಉಪಾಸನೆ “ಎಂದ ಅವರು ಸ್ಥಳದಾನದ ಸಹಕಾರವನ್ನು ನೀಡಿದ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ,ನರಿಮೊಗರು ಇದರ ಮುಖ್ಯಗುರುಗಳು, ಸಿಬ್ಬಂದಿವರ್ಗ , ಎಸ್ .ಡಿ .ಎಂ .ಸಿ. ಅದ್ಜ÷್ಯಕ್ಷರು ಹಾಗೂ ಸರ್ವಸದಸ್ಯರು , ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತಾಧಿಕಾರಿಗಳು , ಅರ್ಚಕರು ಹಾಗೂ ಸಿಬ್ಬಂದಿವರ್ಗ , ನರಿಮೊಗರಿನ ಮರಾಟಿ ಸಮಾಜಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನರಿಮೊಗರು ಸುವರ್ಣ ಎಸ್ಟೇಟ್ ವೇದನಾಥ್ ಸುವರ್ಣ , ವಿಶ್ರಾಂತ ಪ್ರಾಚಾರ್ಯ ದುಗ್ಗಪ್ಪ , ಮೃತ್ಯುಂಜಯೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ .ಟಿ .ಗೋಪಾಲ್ , ಸಂಚಾಲಕ ಗಂಗಾಧರ ಸುವರ್ಣ , ಸ್ಥಳೀಯ ಸಾಮಾಜಿಕ ಮುಂದಾಳು ಪ್ರವೀಣ್ ಆಚಾರ್ಯ , ಸಾಮಾಜಿಕ ಮುಂದಾಳು ವಿಶ್ವೇಶ್ವರ ಭಟ್ ಬಂಗಾರಡ್ಕ , ನರಿಮೊಗರು ಶಾಲಾ ಎಸ್ .ಡಿ.ಎಂ .ಸಿ .ಅಧ್ಯಕ್ಷ ಪ್ರವೀಣ್ ಪೂಜಾರಿ , ಮುಖ್ಯಗುರು ಚರಣ್ ಕುಮಾರ್ , ಶಿಕ್ಷಕಿ ಶ್ರೀಲತಾ , ಪೂರ್ಣಿಮಾ ಸೋಪ್ ಇಂಡಸ್ಟಿçಯ ಶ್ರೀನಿವಾಸ್ ರಾವ್ , ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯ ಈಶ್ವರ ಬಡೇಕಾರ್ , ಕೆ .ಎಸ್ .ಆರ್ .ಟಿ .ಸಿ ಡಿಪೋ ಮ್ಯಾನೇಜರ್ ಸುಬ್ರಮಣ್ಯ ಪ್ರಕಾಶ್ , ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ್ , ಕೆ .ಎಂ .ಎಫ್ ಉದ್ಯೋಗಿ ಸದಾಶಿವ ನಾಯ್ಕ್ , ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ , ನಾರಾಯಣ ಬನ್ನಿಂತಾಯ , ವೈದ್ಯ ಡಾ . ಸುರೇಶ್ ಪುತ್ತೂರಾಯ , ರೋಟರಿ ಕ್ಲಬ್ ಅಧ್ಯಕ್ಷ ಡಾ . ಶ್ರೀಪ್ರಕಾಶ್ ಬಂಗಾರಡ್ಕ, ಕನ್ನಡಪ್ರಭ ವರದಿಗಾರ ಆತ್ಮಭೂಷಣ್ , ಸುದ್ದಿ ಪತ್ರಿಕೆ ವರದಿಗಾರ ಲೋಕೇಶ್ ಬನ್ನೂರು ಹಾಗೂ ಇನ್ನೂ ಅನೇಕ ಪತ್ರಕರ್ತರು , ಗಣ್ಯರು ಉಪಸ್ಥಿತರಿದ್ದರು . ಮಾನ್ಯ ಶಾಸಕ ಅಶೋಕ್ ರೈ ಕೋಡಿಮ್ಬಾಡಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಕಾರ್ಯಕ್ರಮಕ್ಕೆ ಆಮಂತ್ರಣ ನೀಡುವ ಸಂದರ್ಭ ಮೆಚ್ಚುಗೆಯ ಮಾತಾಡಿ ಶುಭ ಹಾರೈಸಿದ್ದರು . ಛಾಯಾಗ್ರಹಣವನ್ನು ಉದಯ ಕುಮಾರ್ ಬಂಗಾರಡ್ಕ ನಿರ್ವಹಿಸಿದರು . ಹರಿಗಣೇಶ್ ಕಲ್ಲೂರಾಯ ಕುಂಜೂರುಪAಜ ರುಚಿಕರ ಭೋಜನ ಸಿದ್ಧಗೊಳಿಸಿದ್ಧರು . ಶಾಮಿಯಾನ, ಲೈಟಿಂಗ್ ವ್ಯವಸ್ಥೆ ರೈ ಸರ್ವಿಸ್ ಪುರುಷರಕಟ್ಟೆ ನಿರ್ವಹಿಸಿದರು . ಪ್ರಸಾದಿನೀ ಆಯುರ್ವೇದ ಆಸ್ಪತ್ರೆ ಸಿಬ್ಬಂದಿ ವರ್ಗ , ಮುಖ್ಯ ಜೀವವಿಮಾ ಸಲಹೆಗಾರ ಎಂ .ಎಸ್ . ಭಟ್ ಸಹಕರಿಸಿದರು. ಪುತ್ತೂರಿನ ಕಲಾರಸಿಕರಿಗೊಂದು ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದ ಡಾ .ಬಂಗಾರಡ್ಕರನ್ನು ಬಂದ ಪ್ರೇಕ್ಷಕರು ಶ್ಲಾಘಿಸಿದರು.

ಕಾರ್ಯಕ್ರಮ ನೇರಪ್ರಸಾರವನ್ನು ಸುದ್ದಿ ಯು ಟ್ಯೂಬ್ ಚಾನೆಲ್ ಹಾಗೂ ಪ್ರಸಾದಿನೀ ಆಯುರ್ನಿಕೇತನ ಯು ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿತ್ತು. ಪ್ರೇಕ್ಷಕರಿಗೆ ರಾತ್ರಿ ಊಟ ಮತ್ತು ತಡ ರಾತ್ರಿ ಚಹಾದ ವ್ಯವಸ್ಥೆ ಮಾಡಲಾಗಿತ್ತು.


ಚೌಕಿ ಪೂಜೆಯಲ್ಲಿ ಪವಾಡ; ಹಿಂಗಾರ ಹೂವಿನ ಪ್ರಸಾದ
ಯಕ್ಷಗಾನದ ಪ್ರಾರಂಭದಲ್ಲಿ ಚೌಕಿ ಪೂಜೆ ವಿಶೇಷ. ಅರ್ಚಕರು ಸೇವಾಯಾಟ ಮಾಡುವವರಿಗೆ ಚೌಕಿ ಪೂಜೆಯ ನಂತರ ಪ್ರಸಾದ ನೀಡುವ ಕಾರ್ಯಕ್ರಮವಿದೆ. ಅದರಂತೆ ಅರ್ಚಕರು ಚೌಕಿ ಪೂಜೆಯಲ್ಲಿ ಮಂಗಳಾರತಿ ವೇಳೆ ಶ್ರೀ ದೇವರ ಬಲ ಭಾಗದಿಂದ ಹಿಂಗಾರ, ಹೂವು ಮುಡಿಯಿಂದ ಜಾರಿಸಿ ಪ್ರಸಾದ ರೂಪದಲ್ಲಿ ನೀಡಿರುವುದು ಪವಾಡವಾಗಿದೆ. ಅದೇ ಪ್ರಸಾದವನ್ನು ಯಕ್ಷಗಾನದ ಸೇವಾಕರ್ತರಾದ ಡಾ. ರಾಘವೇಂದ್ರಪ್ರಸಾದ್ ಭಂಗಾರಡ್ಕ ದಂಪತಿಗೆ ನೀಡಿದರು.


ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ಆಯುರ್ವೇದ ಕ್ಷೇತ್ರದಲ್ಲಿ ಸತತ ಹಲವು ವರ್ಷಗಳ ಸೇವೆಯನ್ನು ಸಲ್ಲಿಸಿದ್ದು , ಎಂಟು ಹಾಸಿಗೆಗಳ ಒಳರೋಗಿ ವಿಭಾಗವಿದ್ದು, ಕೆ.ಪಿ.ಎಂ.ಇ ನೋಂದಾವಣೆಯಾಗಿ, ಐ.ಎಸ್.ಓ. ಸರ್ಟಿಫಿಕೇಟ್ ಹೊಂದಿದ್ದು, ಪಾರ್ಕಿನ್ಸನ್ಸ್ ಕಾಯಿಲೆ , ಪಕ್ಷವಾತ , ಸಂಧಿವಾತ ,ಮೈಗ್ರೇನ್ ತಲೆನೋವು , ಮೂಗಿನ ಪಾಲಿಪ್ , ಮೂಲವ್ಯಾಧಿ , ಮಹಿಳೆಯರ ಮುಟ್ಟಿನ ತೊಂದರೆ, ಸೋರಿಯಾಸಿಸ್ ಚರ್ಮದ ಕಾಯಿಲೆ , ಕಫದ ತೊಂದರೆ , ಅಸಿಡಿಟಿ , ಕಣ್ಣಿನ ಕಾಯಿಲೆ ರೋಗಿಗಳಿಗೆ ಶಸ್ತçಚಿಕಿತ್ಸೆರಹಿತ ಯಶಸ್ವೀ ಚಿಕಿತ್ಸೆ ನೀಡಿ ಹೆಸರುಗಳಿಸಿದೆ . ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ,ಸ್ಮರಣಶಕ್ತಿ , ಬೆಳವಣಿಗೆಯನ್ನು ಹೆಚ್ಚಿಸುವ ಹಾಗೂ ಆಗಾಗ ಬರುವ ಕೆಮ್ಮು ನೆಗಡಿ ಅಲರ್ಜಿ ನಿವಾರಿಸುವ , ಹೆತ್ತವರು ತಮ್ಮ ಮಕ್ಕಳಿಗೆ ತಮ್ಮ ಮನೆಯಲ್ಲೇ ಕೊಡಬಹುದಾದ, ಪ್ರಸಾದಿನೀ ಸ್ವರ್ಣಪ್ರಾಶ ಉತ್ಪನ್ನವು ದೇಶಾದ್ಯಂತ ಗ್ರಾಹಕರನ್ನು ಜಾಲತಾಣದ ಮೂಲಕ ಹೊಂದಿದ್ದು , ಅತ್ಯುತ್ತಮ ಗುಣಮಟ್ಟದ್ದೆಂಬ ಪ್ರಸಿದ್ಧಿಗೆ ಪಾತ್ರವಾಗಿದೆ . ತ್ರಿಪುರ ಪ್ಯೂರಿಫಿಕೇಷನ್ ಧ್ಯಾನ ವಿಧಾನದ ಜೊತೆಗೆ , ಚಿಕಿತ್ಸೆಯಲ್ಲಿ ಸಂಗೀತ -ನಾಟ್ಯಗಳ ಮಹತ್ವವನ್ನು ಗುರುತಿಸಿ ಅಳವಡಿಸಿಕೊಂಡಿದೆ . ಆರೋಗ್ಯದ ನರನಾಡಿ , ಅರೋಗ್ಯ ಪ್ರಸಾದಿನೀ ಹಾಗೂ ಆಯುರ್ವೇದ -ಆಶಾವಾದ ಎಂಬ ಪುಸ್ತಕಗಳನ್ನು ಪ್ರಕಟಗೊಳಿಸಿದೆ. ಆ ದಿಸೆಯಲ್ಲಿ , ಇದೀಗ ಮನೋವಿಕಾಸಕ್ಕೆ ಹಾಗೂ ಮನೋದೈಹಿಕ ಆರೋಗ್ಯಕ್ಕೆ ಪೂರಕವಾಗಿ, ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , (www.Prasadini.com) ಸಂಪರ್ಕಿಸಬಹುವುದು. ಆಯುರ್ವೇದ ತಜ್ಞ ವೈದ್ಯ ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ

LEAVE A REPLY

Please enter your comment!
Please enter your name here