






ರಾಮಕುಂಜ; ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಫೆ.23ರಂದು ನಿಧನರಾದ ಶಾಲೆಯ ಹಿರಿಯ ವಿದ್ಯಾರ್ಥಿ, ಶಾಲೆಗೆ ಶತಮಾನೋತ್ಸವ ಸಂದರ್ಭದಲ್ಲಿ ನೂತನ ರಂಗಮಂದಿರ ಒದಗಿಸಿಕೊಟ್ಟ ರಾಮಮಜಲುಗುತ್ತು ದಿ.ಮಹಾಬಲ ರೈ ಅವರಿಗೆ ಶ್ರದ್ಧಾಂಜಲಿ ಸಭೆ ಮಾ.6ರಂದು ಶಾಲಾ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಿತು.



ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಕಿರಣ್ ಪಾದೆ ಅವರು ನುಡಿನಮನ ಸಲ್ಲಿಸಿ, ಮಹಾಬಲ ರೈ ಅವರನ್ನು ಕಳೆದುಕೊಂಡಿರುವುದು ಕೇವಲ ಅವರ ಕುಟುಂಬಕ್ಕೆ ಮಾತ್ರ ನಷ್ಟವಾಗಿಲ್ಲ. ಹಳೆನೇರೆಂಕಿ ಗ್ರಾಮಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಮಹಾಬಲ ರೈ ಅವರು ಹಳೆನೇರೆಂಕಿ ಶಾಲೆಯ ಅಭಿವೃದ್ಧಿಗೆ ತನ್ನ ಕುಟುಂಬವನ್ನು ಸೇರಿಸಿಕೊಂಡು ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಅವರ ನೆನಪು ಈ ಶಾಲೆಯಲ್ಲಿ ಎಂದಿಗೂ ಉಳಿಯಲಿದೆ. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಹೇಳಿದರು.



ಶಾಲಾ ಮುಖ್ಯಗುರು ವೈ.ಸಾಂತಪ್ಪ ಗೌಡ, ಎಸ್ಡಿಎಂಸಿ ಅಧ್ಯಕ್ಷರಾದ ವೀರೇಂದ್ರ ಪಾಲೆತಡ್ಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜನಾರ್ದನ ಪೂಜಾರಿ ಕದ್ರ, ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ರಮೇಶ್ ರೈ ರಾಮಮಜಲು, ಶೇಖರ ಗೌಡ ಕಟ್ಟಪುಣಿ, ಪುರುಷೋತ್ತಮ ಪೂಜಾರಿ ಬರೆಂಬೆಟ್ಟು, ಶಿಕ್ಷಕ ನವೀನ್ ಎ.ಅವರು ಮಹಾಬಲ ರೈ ಅವರ ಜೊತೆಗಿನ ಒಡನಾಟ, ಅವರ ಸಮಾಜ ಸೇವೆಯನ್ನು ನೆನಪಿಸಿಕೊಂಡು ಗುಣಗಾನ ಮಾಡಿದರು.
ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಚೇತ ಬರೆಂಬೆಟ್ಟು, ಮಾಜಿ ಸದಸ್ಯರಾದ ಕುಶಾಲಪ್ಪ ಗೌಡ ಮುಳಿಮಜಲು, ಮಾಲತಿ ಕದ್ರ, ವಸಂತ ಗೌಡ ಪರಕ್ಕಾಲು, ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಯಶೋಧ ಮರಂಕಾಡಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಅಲೆಪ್ಪಾಡಿ, ವಸಂತಿ ಕನೆಮಾರು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ ಪಾತೃಮಾಡಿ, ಎಸ್ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು, ಮಹಾಬಲ ರೈ ಅವರ ಪುತ್ರಿ ದೀಪ್ತಿ ಎಂ.ರೈ, ಸತೀಶ್ ರೈ, ಶಾಲಾ ಶಿಕ್ಷಕರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ೧ ನಿಮಿಷ ಮೌನ ಪ್ರಾರ್ಥನೆ ಹಾಗೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.









