ಪುತ್ತೂರು:ನಿಲ್ಲಿಸಿದ್ದ ಕಾರಿಗೆ ಒಮ್ನಿ ಡಿಕ್ಕಿ-ಚಾಲಕನಿಗೆ ಗಾಯ : ದೂರು

0

ಪುತ್ತೂರು:ನಿಲ್ಲಿಸಿದ್ದ ಕಾರಿಗೆ ಮಾರುತಿ ಒಮ್ನಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಕಾರು ಚಾಲಕನಿಗೆ ಗಾಯವಾಗಿರುವ ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಘಟನೆ ಕುರಿತು ಕಾರು ಚಾಲಕ ಪುರುಷರಕಟ್ಟೆಯ ಸಲಿಮುದ್ದೀನ್ (34) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ‘ಮಾ.06ರಂದು 16.30 ಗಂಟೆಗೆ ಆರೋಪಿ ಓಮಿನಿ ಕಾರು ಚಾಲಕ ಶ್ರೀನಿವಾಸರಾವ್ ಎಂಬವರು ಶಾಂತಿಗೋಡು-ಪುರುಷರಕಟ್ಟೆ ಸಾರ್ವಜನಿಕ ರಸ್ತೆಯಲ್ಲಿ ಶಾಂತಿಗೋಡು ಕಡೆಯಿಂದ ಪುರುಷರಕಟ್ಟೆ ಕಡೆಗೆ ಒಮ್ನಿ ಚಲಾಯಿಸಿಕೊಂಡು ಹೋಗುತ್ತಾ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿರುವ ಕೃಷ್ಣ ಡ್ರೈವಿಂಗ್ ಸ್ಕೂಲ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ತಾನು ಪುರುಷರ ಶಾಂತಿಗೋಡು ಕಡೆಯಿಂದ ಪುರುಷರಕಟ್ಟೆ ಕಡೆಗೆ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದ ಕಾರಿಗೆ ಹಿಂದಿನಿದ ಅಪಘಾತ ಪಡಿಸಿದ್ದರಿಂದ ತನ್ನ ಎದೆಗೆ ಗುದ್ದಿದ ನಮೂನೆಯ ಗಾಯವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.ಗಾಯಾಳು ಸಲಿಮುದ್ದೀನ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here