






ಪುತ್ತೂರು: ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ಏ.9 ರಿಂದ ಏ.12ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಲಕ್ಷೋತ್ತರ ನಾರಿಕೇಳ ಸಮರ್ಪಣೆ ನಡೆಯುತ್ತಿದ್ದು, ದಿನಂಪ್ರತಿ ವಿವಿಧ ಗ್ರಾಮಗಳಿಂದ ಪ್ರತಿಯೊಬ್ಬ ಭಕ್ತರಿಂದ ರಾಮನಿಗೊಂದು ಹನುಮನಿಗೊಂದರಂತೆ ತೆಂಗಿನಕಾಯಿಗಳನ್ನು ಅರ್ಪಿಸಲಾಗುತ್ತಿದೆ.



ಕೋಟಿ ರಾಮ ತಾರಕ ಜಪಯಜ್ಞ, ಶ್ರೀರಾಮಹನುಮ ಜ್ಯೋತಿ ರಥಯಾತ್ರೆ ಹಾಗೂ ನಾರಿಕೇಳ ಅರ್ಪಣೆ ಸಂಬಂಧ ಸುಮಾರು 60 ಗ್ರಾಮಗಳಿಗೆ ಸಮಿತಿಗಳನ್ನು ರಚಿಸಲಾಗಿದ್ದು, ಈಗಾಗಲೇ ಅನೇಕ ಗ್ರಾಮಗಳ ಭಕ್ತರು ಪ್ರತಿಯೊಬ್ಬ ಭಕ್ತರಿಂದ ರಾಮ ಮತ್ತು ಹನುಮನಿಗೆಂದು ತೆಂಗಿನಕಾಯಿಗಳನ್ನು ಅರ್ಪಿಸುತ್ತಿದ್ದಾರೆ. ಮಾ.2 ರಿಂದ ತೆಂಗಿನಕಾಯಿಗಳನ್ನು ಅರ್ಪಿಸಲಾಗುತ್ತಿದ್ದು, ಬ್ರಹ್ಮಕಲಶೋತ್ಸವದ ವರೆಗೆ ಸಮರ್ಪಣೆ ಮಾಡಲು ಅವಕಾಶವಿದೆ ಎಂದು ಲಕ್ಷೋತ್ತರ ನಾರಿ ಕೇಳ ಸಮರ್ಪಣೆಯ ಸಂಚಾಲಕ ಅರುಣ್ ಕುಮಾರ ಪುತ್ತಿಲ ಅವರು ತಿಳಿಸಿದ್ದಾರೆ.













