ನೆಲ್ಯಾಡಿ ಸೀನಿಯ‌ರ್ ಚೇಂಬರ್‌ಗೆ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಕ್ಕೆ ರನ್ನರ್ ಅಪ್ ಹಾಗೂ ಟೋಪ್ ಫೈವ್ ಪ್ರಶಸ್ತಿ

0

ನೆಲ್ಯಾಡಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನ ರಾಷ್ಟ್ರೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ನೆಲ್ಯಾಡಿ ಲೀಜಿಯನ್, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಹಾಗೂ ಅತ್ಯುತ್ತಮ ಲೀಜನ್ಗಳಲ್ಲಿ ಟೋಪ್ ಫೈವ್ ಲೀಜಿಯನ್ ಆಗಿ ಆಯ್ಕೆಯಾಗಿದೆ.


2025-26ನೇ ಸಾಲಿನಲ್ಲಿ ನೆಲ್ಯಾಡಿ ಸೀನಿಯರ್ ಚೇಂಬ‌ರ್ ಕೈಗೊಂಡ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿ ಹಾಗೂ, ವಿವಿಧ ತರಬೇತಿ ಕಾರ್ಯಕ್ರಮಗಳು ಮುಂತಾದವುಗಳನ್ನು ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.


ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಪಿಪಿಎಫ್ ಎಂ ಆರ್ ಜಯೇಶ, ಪ್ರಧಾನ ಕಾರ್ಯದರ್ಶಿ ಹಾಗೂ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷರೂ ಆದ ಸೀನಿಯರ್ ಎಸ್.ಎಫ್.ಎಂ. ವಾಸುದೇವನ್, ಏರಿಯಾ ಎಫ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ಪಿಪಿಎಫ್ ಸಿದ್ದಗಂಗಯ್ಯ, ಹಾಗೂ ವಿವಿಧ ಪದಾಧಿಕಾರಿಗಳು ಸೇರಿ ಪ್ರಶಸ್ಥಿ ನೀಡಿದರು. ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಪೂರ್ವಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಯೋಜಕರಾದ ಸೀನಿಯರ್ ಪಿಪಿಪಿಎಫ್ ಡಾ ಸದಾನಂದ ಕುಂದರ್, ಅಧ್ಯಕ್ಷರಾದ ಸೀನಿಯರ್ ಎಸ್.ಎಫ್.ಎಂ. ಪ್ರಕಾಶ್ ಕೆವೈ, ಕಾರ್ಯದರ್ಶಿ ಸೀನಿಯರ್ ಪಿಪಿಎಫ್ ಉಲಹನ್ನಾನ್ ಪಿಎಂ, ಕೋಶಾಧಿಕಾರಿ ಸೀನಿಯರ್ ಮೋಹನ್ ಕುಮಾರ್ ಡಿ, ಸೀನಿಯರೆಟ್ ಎಲ್ಸಿ ಪಿಪಿ, ಕೃಷ್ಣಕಮಲ್ ರೆಸಾರ್ಟ್ ಬೆಂಗಳೂರು ಇದರ ಮಾಲಕರಾದ ಜೈಶೇಖರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here