






ಪುತ್ತೂರು: ಶ್ರೀಲಕ್ಷ್ಮೀ ವೆಂಟಕಟ್ರಮಣ ದೇವಸ್ಥಾನ ಹಾಗೂ ಜಿಎಸ್‌ಬಿ ಮಹಿಳಾ ಮಂಡಳಿಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು.






ಮುಖ್ಯ ಅತಿಥಿ ಮಾಸ್ಟರ್ ಪ್ಲಾನರಿ ರೇಖಾ ಆನಂದ್ ಮಾತನಾಡಿ ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಪುರುಷರಿಗೆ ಸಮಾನವಾಗಿ ನಿಂತು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತಸರ ಡಾ. ಅಶೋಕ್ ಪ್ರಭು ಮಾತನಾಡಿ, ಒಂದು ಹೆಣ್ಣು ಇಡೀ ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಹೊರಗೆ ಹೋಗಿ ಗಂಡಸರ ಸಮಾನವಾಗಿ ದುಡಿದು ಸಂಸಾರವನ್ನು ಸಾಗಿಸುತ್ತಿದ್ದಾಳೆ. ಇಂತಹ ಆಧುನಿಕ ಮಹಿಳೆಯರ ಬಗ್ಗೆ ಹೆಮ್ಮೆ ವ್ಯಕ್ತಿಪಡಿಸಿದರು.
ಜಿ.ಎಸ್.ಬಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಲತಾ ಹರೀಶ್ ಶೆಣೈ ಮಾತನಾಡಿ, ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಒಂದು ಮನೆಯಲ್ಲ ಇಡೀ ಸಮಾಜದ ಉದ್ಧಾರವನ್ನು ಮಾಡುವ ಶಕ್ತಿ ಇದೆ ಎಂದರು. ದೇವಳದಲ್ಲಿ ಮುಂದೆ ಮಂಡಳಿಯ ಜವಾಬ್ದಾರಿಗಳ ಬಗ್ಗೆ ಬಹಳ ಚುಟುಕಾದ ವಿವರಣೆ ನೀಡಿದರು. ಕಾರ್ಯಕ್ರಮವನ್ನು ವೆಂಕಟ್ರಮಣ ದೇವಸ್ಥಾನದ ಮುಖ್ಯ ಅರ್ಚಕ ದಿವಾಕರ್ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ. ಗೌರಿ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ
ದೇವಳದ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಪುತ್ತೂರು ಪಾಂಡುರಂಗ ನಾಯಕ್ ಅವರ ಪತ್ನಿ ವಿಜಯಾ ನಾಯಕ್ , ಮಹಿಳಾ ಮಂಡಳಿಯ ಪೂರ್ವಾಧ್ಯಕ್ಷರಾದ ವತ್ಸಲಾ ಶೆಣೈ, ವತ್ಸಲಾ ನಾಯಕ್, ಸುಮನಾ ಪ್ರಭು, ಹಾಗೂ ವಿದ್ಯಾಭಟ್ ಅವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಮುಖ್ಯ ಆಹ್ವಾನಿತ ಅತಿಥಿ ಸಂಧ್ಯಾ ಶೆಣೈ, ಉಡುಪಿಯವರ ವಿಶೇಷ ಹಾಸ್ಯ ಸಂಜೆ ಕಾಠ್ಯಕ್ರಮ ನಡೆಯಿತು. ಸುಮಾರು ಒಂದೂ ಕಾಲು ತಾಸು ಅವರು ತಮ್ಮ ಹಾಸ್ಯದ ಮೂಲಕ ಹಾಗೂ ಜೀವನದ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟರು. ಸುಮಾರು 200 ಮಂದಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧಾ ವಿಜೇತರು ಹಾಗೂ ಕಾರ್ಯಕ್ರಮ ನಡೆಸಲು ಧನ ಸಹಾಯ ನೀಡಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸುಮನಾ ಪೈ ಅವರಿಗೆ ಅದೃಷ್ಟ ಮಹಿಳೆ ಬಹುಮಾನ ಲಭಿಸಿತು.
ವೀಣಾ ನಾಯಕ್ ಹಾಗೂ ಉಷಾ ಭಟ್ ಪ್ರಾರ್ಥಿಸಿದರು. ಯೆಳ್ತಿಮಾರ್ ಇಂಡಸ್ಟ್ರೀಯ ಮಾಲಕಿ ವಿಜಯಲಕ್ಷ್ಮೀ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಮಿ ವಿದ್ಯಾ ಶೆಣೈ ಹಾಗೂ ಅಶ್ವಿನಿ ರಾಘವೇಂದ್ರ ಶೆಣೈ ಅವರು ನೃತ್ಯ ಮಾಡಿದರು. ಗಾಯತ್ರಿ ಕಾಮತ್ ಕವಿತೆ ವಾಚಿಸಿದರು. ವತ್ಸಲಾ ನಾಯಕ್ ಹಾಗೂ ತಂಡ ಹಾಸ್ಯ ನಾಟಕದ ಮೂಲಕ ಜನರನ್ನು ಮನರಂಜಿಸಿದರು. ಕಾರ್ಯದರ್ಶಿ ಅಕ್ಷತಾ ಪ್ರಶಾಂತ್ ಶೆಣೈ ಸ್ವಾಗತಿಸಿದರು. ಮಂಡಳಿಯ ಜೊತೆ ಕಾರ್ಯದರ್ಶಿ ಮಿತ್ರಾಪ್ರಭು, ಹರೀಶ್ ಶೆಣೈ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಮಂಡಳಿಯ ಕೋಶಾಧಿಕಾರಿ, ಶುಭಲತಾ ಶೆಣೈ ಸನ್ಮಾನಿತರ ಪಟ್ಟಿ ವಾಚಿಸಿದರು. ಉಪಕೋಶಾಧಿಕಾರಿ ಮುಕ್ತ ಸುದರ್ಶನ್ ನಾಯಕ್ ವಂದಿಸಿದರು. ಕಾರ್ ಯುವ ಪ್ರಶಸ್ತಿ ವಿಜೇತೆ ಸಮೃದ್ಧಿ ಶೆಣೈ ಕಾಠ್ಯಕ್ರಮ ನಿರೂಪಿಸಿದರು. ರಾತ್ರಿ ದೇವರ ಪೂಜೆಯ ಬಳಿಕ ವಿಶೇಷ ಭೋಜನ ನಡೆಯಿತು.










